Showing posts with label ತುಂಗಾತೀರಮಂದೀರ ರಾಘವೇಂದ್ರಸದ್ಗುರುವರ ananta vittala. Show all posts
Showing posts with label ತುಂಗಾತೀರಮಂದೀರ ರಾಘವೇಂದ್ರಸದ್ಗುರುವರ ananta vittala. Show all posts

Monday, 6 September 2021

ತುಂಗಾತೀರಮಂದೀರ ರಾಘವೇಂದ್ರಸದ್ಗುರುವರ ankita ananta vittala

 ರಾಗ: ರಾಗ: ಯಮುನಾ ಕಲ್ಯಾಣಿ ತಾಳ: ಆದಿ

ತುಂಗಾತೀರಮಂದೀರ

ರಾಘವೇಂದ್ರಸದ್ಗುರುವರ


ಸಿಂಗನರನ ಪದಕಿಂಕರ

ಕಂಗೊಳಿಸುವೆ ತರುಧೇನುಸುರ ಅ. ಪ


ಪೊಂಬಸಿರನ ಸೇವಕ ಅಮರ

ಕಂಬದಿ ತೋರಿದೆ ಹರಿಯ ತ್ವರ

ಸಂಭ್ರಮಿಸಿದನಾ ವೇಣುಧರ

ತುಂಬಿದೆ ಪರಿಮಳಾಹ್ಲಾದಕರ 1

ಪುರಮಂತ್ರಾಲಯಸ್ಥಿತವಸಿತ

ಕರೆದಲ್ಲಿಗೆ ತಾಬರುತಿರುತ

ಶರಣರ ಕೋರಿಕೆ ಸಲ್ಲಿಸುತ

ಪೊರೆಯುವೆ ಪುಣ್ಯವ ವಿತರಿಸುತ 2

ಶಿರಬಾಗಿಸಿ ಬೇಡುವೆ ನಿನ್ನ

ಕರುಣಿಸಿ ಪರಿಸರಮತ ಜ್ಞಾನ

ಮರುತಪಿತಾನಂತವಿಠಲನ 

ಚರಣವ ತೋರಿಸೊ ದಯಾ ಘನ 3

***