ರಾಗ: ರಾಗ: ಯಮುನಾ ಕಲ್ಯಾಣಿ ತಾಳ: ಆದಿ
ತುಂಗಾತೀರಮಂದೀರ
ರಾಘವೇಂದ್ರಸದ್ಗುರುವರ ಪ
ಸಿಂಗನರನ ಪದಕಿಂಕರ
ಕಂಗೊಳಿಸುವೆ ತರುಧೇನುಸುರ ಅ. ಪ
ಪೊಂಬಸಿರನ ಸೇವಕ ಅಮರ
ಕಂಬದಿ ತೋರಿದೆ ಹರಿಯ ತ್ವರ
ಸಂಭ್ರಮಿಸಿದನಾ ವೇಣುಧರ
ತುಂಬಿದೆ ಪರಿಮಳಾಹ್ಲಾದಕರ 1
ಪುರಮಂತ್ರಾಲಯಸ್ಥಿತವಸಿತ
ಕರೆದಲ್ಲಿಗೆ ತಾಬರುತಿರುತ
ಶರಣರ ಕೋರಿಕೆ ಸಲ್ಲಿಸುತ
ಪೊರೆಯುವೆ ಪುಣ್ಯವ ವಿತರಿಸುತ 2
ಶಿರಬಾಗಿಸಿ ಬೇಡುವೆ ನಿನ್ನ
ಕರುಣಿಸಿ ಪರಿಸರಮತ ಜ್ಞಾನ
ಮರುತಪಿತಾನಂತವಿಠಲನ
ಚರಣವ ತೋರಿಸೊ ದಯಾ ಘನ 3
***
No comments:
Post a Comment