..
kruti by Nidaguruki Jeevubai
ಮಂಗಳಂ ನರಹರಿಗೆ ಜಯ ಜಯ
ಮಂಗಳ ಮುರಹರಗೆ ಪ
ಮಂಗಳ ಮದನಗೋಪಾಲ ಶ್ರೀಕೃಷ್ಣಗೆ
ಮಂಗಳ ಮಾಧವಗೆ ಅ.ಪ
ವಸುದೇವ ಸುತನಾಗಿ ಗೋಕುಲದೊಳು
ಮೊಸರು ಬೆಣ್ಣೆಯ ಕದ್ದು
ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ
ರಾಸ ಕ್ರೀಡೆಯಾಡಿದ ಹರಿಗೆ 1
ನಳಿನಮುಖಿಯರೆಲ್ಲ ನೀರೊಳಗಾಡಿ
ಬಳಲಿ ಮೇಲಕೆ ಬರಲು
ಲಲನೆಯರ ಕಂಡು ಪರಿಹಾಸ್ಯ ಮಾಡಿದ
ಚೆಲುವ ಗೋಪಾಲಕೃಷ್ಣಗೆ2
ಬೆಟ್ಟವ ಬೆರಳಿನಲಿ ಎತ್ತಿದ
ಭಕ್ತವತ್ಸಲ ಹರಿಗೆ
ಮಿತ್ರೆಯರಿಗೆ ಮೊಸರು ಬುತ್ತಿಯ
ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3
ಪುಟ್ಟಬಾಲಕನಾಗಿ ಗೋವ್ಗಳನೆಲ್ಲ
ಅಟ್ಟಿಯ ಮನೆಗೆ ಪೋಗಿ
ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ
ರತ್ನದಾರತಿ ಎತ್ತಿರೆ 4
ಕೊಂದು ಕಂಸನÀ ಬೇಗ ಮಧುರೆಲಿ ನಿಂತ
ಮಹಾನುಭಾವಗೆ
ತಂದೆ ಶ್ರೀ ಕಮಲನಾಭವಿಠ್ಠಲಗೆ
ಕುಂದಣದಾರತಿಯ 5
***