Showing posts with label ನವನೀತ ತಸ್ಕರಾಯ ಜಯಮಂಗಳಂ ಪವಮಾನ vijaya vittala. Show all posts
Showing posts with label ನವನೀತ ತಸ್ಕರಾಯ ಜಯಮಂಗಳಂ ಪವಮಾನ vijaya vittala. Show all posts

Thursday, 17 October 2019

ನವನೀತ ತಸ್ಕರಾಯ ಜಯಮಂಗಳಂ ಪವಮಾನ ankita vijaya vittala

ನವನೀತ ತಸ್ಕರಾಯ ಜಯಮಂಗಳಂ
ಪವಮಾನ ವಂದಿತಾಯ ಶುಭಮಂಗಳಂ ಪ

ವಿಶ್ವ ಪರಬ್ರಹ್ಮ ಅಚ್ಯುತಾಯ
ಶರನಿಧಿ ಮಂದಿರಾಯ ಜಯಮಂಗಳಂ
ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ
ಸಿರಿದೇವಿ ಅರಸಾಯ ಶುಭಮಂಗಳಂ 1

ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ
ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ
ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ
ಶೇಷರಾಜ ಶಯನಾಯ ಶುಭಮಂಗಳಂ 2

ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ
ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ
ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ
ಚಾಣೂರ ಮರ್ಧನಾಯ ಶುಭಮಂಗಳಂ 3

ವಿಶ್ವ ಕುಟುಂಬಿ ಪಾಲಾಯ
ವಿಷ್ಣು ಸರ್ವೋತ್ತಮಾಯ ಜಯ ಮಂಗಳಂ
ಶಿಷ್ಯ ಜನ ವರದಾಯ ಸಿದ್ಧ ಪ್ರಸಿದ್ಧ ರೂಪಾಯ
ಮುಷ್ಟಿಕಾ ಸುರವಧಾಯ ಶುಭಮಂಗಳಂ 4

ಬಂಧು ಬಂಧನಾಯಾ ಮಹಸಿಂಧು ನರ ರಕ್ಷಕಾಯ
ಸಿಂಧುರಾಜಾ ಹರಣಾಯ ಜಯಮಂಗಳಂ
ವೃಂದಾವನ ಸಂಚಾರಾಯ ವಿಜಯವಿಠ್ಠಲರೇಯಾಯ
ಮಾಧವ ದೇವಾಯ ಶುಭಮಂಗಳಂ5
**********