ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನೇ ನಂಬಿದೆನಯ್ಯಾ ಪ
ನಿನ್ನನೇ ನಂಬಿದೆನಯ್ಯಾ | ಎನ್ನ ಬಿಡದಿರು ಕೈಯ್ಯಾ | ಬೀರೆಲೋದಯಾ 1
ತರಳ ತಾಯಿಯಲ್ಲದೆ | ನೆರೆಹೊರೆಯ ಬಲ್ಲದೇ | ಮರಳು ಮಂದನೆನ್ನದೆ | ಅರಹು ಕೂಡಿಸೋ ತಂದೆ 2 ಹೋದೆಣಿಕೆಯ ಬಿಟ್ಟು | ಪಾದಸ್ಮರಣೆ ಕೊಟ್ಟು | ಸಾಧುಸಂಗದಲಿಟ್ಟು | ಬೋಧಾಮೃತವನಿಟ್ಟು 3 ಜ್ಞಾನ ಭಕುತಿ ಇಲ್ಲಾ ಮೌನ ಸಾಧನವಿಲ್ಲಾ | ಏನೇನು ಸಾಧನವಿಲ್ಲಾ | ನೀನು ಪೇಕ್ಷಿಸುದಲ್ಲಾ4 ಗುರು ಮಹಿಪತಿ ಸ್ವಾಮೀ | ಶರಣರ ರಕ್ಷಕ ನೇಮಿ | ಸುರಮುನಿಜನ ಪ್ರೇಮಿ | ಹೊರಿಯೋ ಸಾಸಿರ ನಾಮಿ5
****