Showing posts with label ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ vijaya vittala. Show all posts
Showing posts with label ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ vijaya vittala. Show all posts

Wednesday, 16 October 2019

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ ankita vijaya vittala

ವಿಜಯದಾಸ
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ |
ವಿವೇಕವೇ ನಿನಗಿದು ? ಪ

ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು |
ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ

ಲೇಸಾದರು ವಿಷಯದಾಸೆಯ ಬಿಡಲೊಲ್ಲಿ |
ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು ||
ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- |
ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1

ಸತಿ-ಸುತರನು ನೀನು ಸಲಹುವೆನೆನುತಲಿ |
ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ ||
ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ |
ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2

ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ |
ಕೆಟ್ಟು ಪೋಗುವಿ ಯಾತಕೋ ಜೀವನವೆ ||
ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ |
ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
***

pallavi

yAkE jIvanavE nI shrIkAntanu maravi vivEkavE ninagidu?

anupallavi

jOkeyindali ninna sAkuva shri hariyu bEkAda varavIva bhaktavatsala doreya

caraNam 1

lEsAdaru viSayadAseya biDlolli yEsu jalmangaLAdaru I sharIravu ninnandendu tiLidu
OshisuviyO baride dOSarahita shrInivAsana nenedu nI dOSava kaLedenna pOSisu ennedale

caraNam 2

sati sutaranu nInu salahuvenenutalli ati cinte ninagyAtakO gati ninagAguva
hita cintane mADO sagatiyAguva tanaka ratipati itana nenedu nI pratIkSaNa harikathe kELadale

caraNam 3

poTTegOsuga bhraStra stutisi nI keTTu pOguvi yAtakO jIvanavE
uTTisidava ninna poTTege koDanEnO keTTu hOgade vijayaviThanna nenadu sukhiyAgu
***