Showing posts with label ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ gadugina veeranarayana. Show all posts
Showing posts with label ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ gadugina veeranarayana. Show all posts

Wednesday 1 September 2021

ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ankita gadugina veeranarayana

 ..

kruti by ವೀರನಾರಾಯಣ Veeranarayana 


ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ


ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ.


ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1


ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2


ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3


ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4

***