ರಾಗ - : ತಾಳ -
ಯಂಥ (ಎಂಥ) ಮಾಯದವನೆ ಪಾಂಡುರಂಗ l
ಯಂಥ ಮಾಯದವನೆ l
ಯಂಥ ಮಾಯದವ ತಂತುಕಾರನಿವ l
ಯೆಂತು ತಿಳಿಯದೆ ಮಹಂತ ಬೊಮ್ಮ ಶೌರಿ ll ಪ ll
ಮೂರು ತಿಂಗಳೊಳು ಮಾಮಿ ಎಂದು l
ವಾರಿನೋಟದಿ ನೋಡುತ್ತ l
ಆರುಬಲ್ಲರೊ ಹುಸೆ ಖರೆವೊ ಯೆಂದೆನಲು l
ಸಾರಿ ಪೇಳಿ ಪೋದನೆ ಪಾಂಡುರಂಗ ll 1 ll
ಆರನೇ ತಿಂಗಳೊಳ್ ನವಮಾಸ l
ಪೂರಾವಾಗೋ ಕಾಲದಿ l
ಭಾರಿಭಾರಿಗೆ ಬಂದು ಮಾಮಿ ಎಚ್ಚರಿಕೆಂದು l
ಸಾರಿ ಪೇಳಿ ಪೋದನೇ ಪಾಂಡುರಂಗ ll 2 ll
ಭೂಪತ್ವನದಿ ವ್ಯಾಳ್ಯದಿ ಬಂದು ನಿಂತು l
ಆ ಪದುಮೆಯರಸ ಆಪ l
ನ್ನಪಾಲ ಶ್ರೀಮೋಹನ್ನವಿಟ್ಠಲ l
ತಾಪೇಳಿ ಪೋದ ಕಾಣೆ ll 3 ll
***