Showing posts with label ರಾಮ ನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ purandara vittala RAAMANAAMAVA NUDI NUDI KAAMAKRODHAGALA BIDI BIDI. Show all posts
Showing posts with label ರಾಮ ನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ purandara vittala RAAMANAAMAVA NUDI NUDI KAAMAKRODHAGALA BIDI BIDI. Show all posts

Monday, 6 December 2021

ರಾಮ ನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ purandara vittala RAAMANAAMAVA NUDI NUDI KAAMAKRODHAGALA BIDI BIDI



2ndAudio by Sri. Madhava Rao




ರಾಮ ನಾಮವ ನುಡೀ ನುಡೀ

ಕಾಮ ಕ್ರೋಧಗಳ ಬಿಡೀ ಬಿಡೀ ಶ್ರೀ || ಪ ||

ಗುರುಗಳ ಚರಣವ ಹಿಡೀ ಹಿಡಿ

ಹರಿ ನಿರ್ಮಾಲ್ಯವ ಮುಡೀ ಮುಡೀ

ಕರೆ ಕರೆ ಭವಪಾಶ ಕಡೀ ಕಡೀ ಬಂದ

ದುರಿತವನೆಲ್ಲ ಹೊಡೀ ಹೊಡೀ || ೧ ||

ಸಜ್ಜನ ಸಂಗವ ಮಾಡೋ ಮಾಡೋ

ದುರ್ಜನ ಸಂಗವ ಬಿಡೋ ಬಿಡೋ

ಅರ್ಜುನನ ಸಾರಥಿಯ ನೋಡೋ ನೋಡೋ

ಹರಿಭಜನೇಲಿ ಮನ ಇಡೋ ಇಡೋ || ೨ ||

ಕರಿರಾಜ ವರದನ ಸಾರೋ ಸಾರೋ

ಶ್ರಮ ಪರಿಹರಿಸೆಂದು ಹೋರೋ ಹೋರೋ

ವರದ ಭೀಮೇಶನ ದೂರದಿರೋ ನಮ್ಮ

ಪುರಂದರ ವಿಠಲನ ಸೇರೋ ಸೇರೋ || ೩ ||
***

rAma nAmava nuDI nuDI
kAma krOdhagaLa biDI biDI SrI || pa ||

gurugaLa caraNava hiDI hiDi
hari nirmAlyava muDI muDI
kare kare bhavapASa kaDI kaDI baMda
duritavanella hoDI hoDI || 1 ||

sajjana saMgava mADO mADO
durjana saMgava biDO biDO
arjunana sArathiya nODO nODO
haribhajanEli mana iDO iDO || 2 ||

karirAja varadana sArO sArO
Srama parihariseMdu hOrO hOrO
varada BImESana dUradirO namma
puraMdara viThalana sErO sErO || 3 ||
***

pallavi

rAma nAmava nuDi nuDi kAma krOdhagaLa biDi biDi shrI rAma nAmava nuDi nuDi

caraNam 1

gurugaLa caraNava hiDi hiDi hari nirmAlyava muDi muDi karakare
bhava pAshava kaDi kaDi banda duritavanella hoDi hoDi

caraNam 2

sajjanara sangava mADO mADO durjanara sangava biDO biDO
arjuna sArathi rUp nODO nODO hari bhajaneyali mana iDO iDO

caraNam 3

karirAja varadana sArO sArO shrama pariharisendu hOrO hOrO
varada bhImasEna duradirO namma purandara viTTalana sErO sErO
***

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ
ಶ್ರೀರಾಮನಾಮವ ನುಡಿ ನುಡಿ

ಗುರುಗಳ ಚರಣವ ಹಿಡಿ ಹಿಡಿ

ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ

ಸಜ್ಜನರ ಸಂಗವ ಮಾಡೋ ಮಾಡೋ

ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ

ಕರಿರಾಜವರದನ ಸಾರೋ ಸಾರೋ ಶ್ರಮ

ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ
***

ರಾಗ ನಾದನಾಮಕ್ರಿಯ ಆದಿತಾಳ (raga tala may differ in audio)

Raama naamava nudi nudi |
Kama krodhava bidi bidi sri || pa ||

Gurugala charanava hidi hidi |
Hari nirmalyava mudi mudi |
Kare kare bhavapasha kadi kadi | banda |
Duritava nellava hodi hodi || 1 ||

Sajjana sangava mado mado |
Durjana sangava bido bido |
Arjunana sarathiya nodo nodo |
Hari bhajaneli manavanu ido ido || 2 ||

Kariraja varadana saro saro |
Shrama pariharisendu horo horo |
Varada bheemesana dooradiro | namma |
Purandara vithalana sero sero || 3 ||
***

ಶ್ರೀ ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ ||ಪ||

ಗುರುಗಳ ಚರಣವ ಹಿಡೀ ಹಿಡೀ
ಹರಿ ನಿರ್ಮಾಲ್ಯವ ಮುಡೀ ಮುಡೀ
ಕರೆ ಕರೆ ಭವಪಾಶ ಕಡೀ ಕಡೀ
ಬಂದ ದುರಿತವನೆಲ್ಲ ಹೊಡೀ ಹೊಡೀ ||1||

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನ ಸಾರಥಿ ರೂಪ ನೋಡೋ ನೋಡೋ
ಹರಿಭಜನೆಯಲಿ ಮನ ಇಡೋ ಇಡೋ ||2||

ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ

ವರದ ಭೀಮೇಸನನ ದೂರದಿರೋ ನಮ್ಮ 
ಪುರಂದರ ವಿಠಲನ ಸೇರೋ ಸೇರೋ ||3||

***********

ರಾಗ -  ಕಾನಡ  :  ತಾಳ - ಆದಿತಾಳ

ರಾಮ ನಾಮವ ನುಡಿ ನುಡಿ ಶ್ರೀ l
ರಾಮನ ನಾಮವೇ ನುಡಿ ನುಡಿ l
ಮನ ಕಾಮ ಕ್ರೋಧಗಳ ಬಿಡಿಬಿಡಿ ll ಪ ll

ಹರಿ ನಿರ್ಮಾಲ್ಯವ ಮುಡಿ ಮುಡಿ l
ಪರಮಾಮೃತರಸ ಕುಡಿ ಕುಡಿ l
ಗುರುಗಳ ಚರಣವ ಪಿಡಿ ಪಿಡಿ l
ದುರಿತಗಳೆಲ್ಲವ ಹೊಡಿಹೊಡಿ ll 1 ll

ಸಜ್ಜನ ಸಹವಾಸ ಮಾಡೊ ಮಾಡೊ l
ದುರ್ಜನ ಸಹವಾಸ ಬಿಡೊ ಬಿಡೊ l
ನಮ್ಮರ್ಜುನ ಸಾರಥಿಯ ನೋಡೊ ನೋಡೊ ಹರಿ l
ಭಜನೆಯಲ್ಲಿ ಮನವಿಡೊ ಇಡೊ ll 2 ll

ಗಜರಾಜ ವರದನ ಸಾರೊ ಸಾರೊ l
ಮಜ ಭಾಪು ಎನುತತಲೆ ದೂರೊ ದೂರೊ l
ಸಜ್ಜನ ಧೊರೆಯೆಂದು ಹೊರೊ ಹೊರೊ l
ನಮ್ಮ ಪುರಂದರವಿಠಲನ ಸೇರೊ ಸೇರೊ ll 3 ll
******