Showing posts with label ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ shreeda vittala. Show all posts
Showing posts with label ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ shreeda vittala. Show all posts

Sunday, 1 August 2021

ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ ankita shreeda vittala

 ..

kruti by Srida Vittala Dasaru  Karjagi Dasappa


ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ ಪ


ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದಅ.ಪ.


ಮಚ್ಛರೂಪಿಲಿ ಹೆಚ್ಚಿದ ದೈತ್ಯರ ತುಚ್ಛಿಸಿ ವೇದವ ತಂದ ಹರಿ 1


ಸ್ವಚ್ಛಮಂದರ ಯದೃಚ್ಛದಿ ಮುಣುಗಲು ಕಚ್ಛಪ

ವೇಷದಿ ನಿಂದಾ ಹರಿ 2


ಶ್ರೀಕರ ಹರಿ ಭೀಕರ ದಿತಿಜರ 

ಸೂಕರ ರೂಪಿಲಿ ಕೊಂದಾ ಹರಿ 3


ಶಂಬರಾರಿಪಿತ ಕಾಂಬು ಚಕ್ರಧರ 

ಕಂಬವ ಭೇದಿಸಿ ಬಂದ ಹರಿ4


ಶ್ಯಾಮರೂಪ ಗುಣಧಾಮ ಹರಿಯು ತಾ

ವಾಮನ ರೂಪಿಲಿ ನಿಂದಾ ಹರಿ5


ಕ್ಷತ್ರಕುಲವ ನಿಕ್ಷತ್ರಮಾಡಲು 

ಭೃಗು ಪುತ್ರನಾಗಿ ತಾ ನಿಂದಾ ಹರಿ 6


ದಶರಥಸುತ ಹರಿ ದಶಮುಖನಳಿದು 

ಕುಶಲದಿ ಸೀತೆಯ ತಂದಾ ಹರಿ 7


ನಂದಗೋಪನ ಕಂದನು ಬಹು ಗೋವೃಂದದೊಳಗೆ

ತಾ ನಿಂದಾ ಹರಿ 8


ಅಂಗನೆಯರ ವ್ರತಭಂಗ ಮಾಡಲನಂಗ 

ಜನಕ ತಾ ಬಂದಾ ಹರಿ 9


ದುಷ್ಟgನಳಿದು ಶಿಷ್ಟಜನರ ಪರಮೇಷ್ಟಿ 

ಎನಿಸಿ ತಾ ನಿಂದಾ ಹರಿ 10


ಶ್ರೀದವಿಠಲ ಕರುಣದಿಂದಲಿ ನಂದತತಿ 

ಸಲಹುವೆನೆಂದಾ ಹರಿ 11

***