ankita ಶ್ರೀಶ್ರೀನಿವಾಸ
ರಾಗ: [ರೀತಿಗೌಳ] ತಾಳ: [ಆದಿ]
ಗುರುರಾಯರ ನಂಬಿರೋ ರಾಘವೇಂದ್ರ
ಗುರುರಾಯರ ನಂಬಿರೋ ಜಗದೊಳು ಪ.
ಗುರುರಾಯರ ನಂಬಿ ವರಗಳ ಬೇಡಿರೊ
ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1
ಆದಿ ಪ್ರಹ್ಲಾದರು ಮೋದದಿ ಹರಿಪದ
ಆದರದಿಂದ ಜಗಕೆ ಸಾಧಿಸಿ ಬೀರಿದರೊ 2
ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ
ಗತ ಪುರುಷೋತ್ತಮ ಗುಹ ಪಥದೊಳಗಿಪ್ಪರ 3
ತೃತೀಯ ರಾಘವೇಂದ್ರ ಪತಿತ ಪಾವನ ನಾಮ
ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ(?) ಬೇಗ 4
ಭೂತ ಪ್ರೇತಗಳ ಪ್ರೀತಿಯೊಳಳಿದು
ಶ್ವೇತ ಕುಷ್ಠಗಳ ದೂರ ಮಾಳ್ಪವರ 5
ಸ್ಮರಣೆ ಮಾಡುತ ನರಹರಿ ಪಾದ ಪಂಕಜ
ದುರಿತ ದೂರ ಶ್ರೀಶ್ರೀನಿವಾಸನ ಭಜಿಪ ಗುರು 6
***