ಚನ್ನಪಟ್ಟಣದ ಅಹೋಬಲದಾಸರು
ಪರಮಾತ್ಮನೇ ಪಾಲಿಸೊ ಬೇಗ ನೀ ಪ
ಕರಸುದರ್ಶನನೆ ನೀರಜಾರಿಪ್ರಿಯ ನಾರಸಿಂಹನ್ಯಾರೊ ನಾಗಶಯನ ಬಾರೊ 1
ಅಂತರಾತ್ಮನ್ಯಾರೋ ಇಂತು ಬೇಗ ಬಾರೊ ಕಂತುಜನಕನ್ಯಾರೋ ಕಾಮನಯ್ಯ ಬಾರೊ 2
ಆದಿರೂಪನ್ಯಾರೊ ಅಚ್ಚುತ ನೀ ಬಾರೊ ವಾದಿಭೀಕರನಾದಾ ವೆಂಕಟೇಶನೆಂಬೊ 3
ವಾಸವ ವಿನುತಾ ಹಾಸನದೊಳಿಪ್ಪ ದೇಶಿಕಾ ನೀ ತುಲಶೀರಾಮದಾಸನಾದ 4
***