ಗಂಗಾಧರ ಸ್ಮರತ್ರಿಪುರಹರ ದೇವ ಪ
ಅಂಗಜಹರ ಭಸಿತಾಂಗ ಮಹಾಲಿಂಗ
ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ
ಶ್ರದ್ಧಾ ಮೂರುತಿ ಭೂತೇಶ ಸದ್ಯೋಜಾತ
ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ
ಸದಮಲಮೂರುತಿ ಹೃದಯಸದನದೊಳು
ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1
ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ
ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ
ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು
ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2
ಶುಕದೂರ್ವಾಸಸ್ವರೂಪ ಜೈಗೀಷರೂಪ
ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
****