Showing posts with label ಕಂಡೆ ನಾ ಸಾಸಿರನಾಮದಶೇಷಮಹಿಮ prasannavenkata. Show all posts
Showing posts with label ಕಂಡೆ ನಾ ಸಾಸಿರನಾಮದಶೇಷಮಹಿಮ prasannavenkata. Show all posts

Monday, 11 November 2019

ಕಂಡೆ ನಾ ಸಾಸಿರನಾಮದಶೇಷಮಹಿಮ ankita prasannavenkata

by ಪ್ರಸನ್ನವೆಂಕಟದಾಸರು
ಕಂಡೆನಾ  ಸಾಸಿರನಾಮದಶೇಷಮಹಿಮ ವೆಂಕಟೇಶನ ಮೂರುತಿಯ ಪ.ಶೇಷಗಿರಿಗೆ ಕೈವಲ್ಯವೆನಿ ಪ 

ಸ್ವಾಮಿಪುಷ್ಕರಿಣಿಯವಾಸನಕಂಡೆನಾಅ.ಪ.

ವಿಕಸಿತಸರಸಿಜ ಸಮಪದಯುಗಳನಅಖಿಳಜಗದೆರೆಯನನಖಶ್ರೇಣಿಗಳೊಳು ತರತರದಿ ಮೆರೆವಸುಖಮಣಿಗಳ ಕಂಡೆನಾ 1

ಗುಲ್ಛಕೆ ನೂಪುರ ಭೂಷಿತ ವರಫಣಿತಲ್ಪನ ಮೂರುತಿಯಒಪ್ಪುವ ದ್ವಿಜದಂತಿಹ ಜಘನ ಕಂದರ್ಪನಯ್ಯನ ಕಂಡೆನಾ 2

ಹೊಂಗನ್ನಡಿಗಳ ಹಳಿದೊಪ್ಪುವ ಜಾನುಂಗಳ ಚೆನ್ನಿಗನಬಂಗಾರ ಬಾಳೆಯ ಕಂಬದಂತೆಸೆವ ಬೆಡಂಗಿನ ತೊಡೆಯವನ ಕಂಡೆನಾ 3

ಕಟ್ಟಿಹ ಕಟಹವನಿಟ್ಟ ಝಗ ಝಗಿಸುವ ಪೊಂಬಟ್ಟೆಯನುಟ್ಟವನಇಟ್ಟ ಕಿಂಕಿಣಿದಾಮ ಮಧ್ಯತ್ರಿವಳಿ ನಾಭಿಸೃಷ್ಟಿಯುದರದವನ ಕಂಡೆನಾ 4

ಉರದಿ ಮೆರೆವ ಸಿರಿವತ್ಸಲಾಂಛನಕೇಯೂರ ಕೌಸ್ತುಭಧರನಸಿರಿತುಲಸಿ ಪದಕಹಾರ ಕಂಬುಕಂದರತಿರುವೆಂಗಳಯ್ಯನ ಕಂಡೆನಾ5

ಅರಿಮಥÀನವ ಮಾಳ್ಪರಿ ಶ್ರುತಿಮಯವಾದವರಶಂಖೋಧೃತನವರಾಭಯ ನೀಡುವವರಗದೆಪದುಮದಪರಮಾಂಗನ ಕಂಡೆ ನಾ 6

ಅಂಬುಜಮೊಗದೊಳು ಕಾಂತಿಯ ಬೀರುವಲಂಬಿತ ಕುಂಡಲನಪೊಂಬಣ್ಣದ ಸಂಪಿಗೆ ಸಂಪಿಗೆನಾಸಿಕಲುಳಿ ನಾಸಾಪುಟದವನ ಕಂಡೆನಾ 7

ಮರಿಕೂರುಮನಂದದಿ ಕದಪುಗಳು ಅಮರುತ ಬಿಂಬಾಧರನಪೆರೆನೊಸಲಿನ ಭ್ರೂಲತೆ ಕಿರುನಗೆ ಕಸ್ತೂರಿ ತಿಲಕಾಂಕಿತನ ಕಂಡೆನಾ 8

ಕೋಟಿಇನತೇಜದಮಕುಟವರಕರುಣನೋಟದ ಜಗಪಾಲನಹಾಟಕಗಿರಿಯ ಪ್ರಸನ್ನವೆಂಕಟ ಜಗನ್ನಾಟಕ ಸೂತ್ರಧಾರನ ಕಂಡೆನಾ 9
********