Showing posts with label ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ prasannavenkata. Show all posts
Showing posts with label ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ prasannavenkata. Show all posts

Friday, 8 November 2019

ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ankita prasannavenkata

by ಪ್ರಸನ್ನವೆಂಕಟದಾಸರು
ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ಏಕಾಂತಕಾಂತೆರೊಳಾಡುವ ಕೊಂಕು ನೋಡುವ ಪ.

ಮುಗುಳುನಗೆಗಳಿಂದ ಮಡದೇರ ಕಂಚುಕದಬಿಗುಹಿನ ಮಲಕ ಬಿಟ್ಟ ಬಹಳ ದಿಟ್ಟಉಗುರೊತ್ತಿ ಗುರುತು ಪೊಂಬುಗುರಿಗಳೆಮ್ಮವೆಮೊಗ್ಗು ಮೊಲೆಗಳ ಪಿಡಿದು ಮೊನೆ ನೋಡಿದ 1

ತೋಳೆರಡನು ತಳಕಿಕ್ಕಿ ಇವಿಗೋ ದುಂಡುಮೊಲೆ ಎನಗಂದವೆಂದು ಮೋಹನಸಿಂಧುತಾಳಿದ್ದ ಕೊರಳೊಳು ತನ್ನ ಪದಕದೊಳುಮೇಲದೆಯೆಂದಪ್ಪಿದ ಬಿಗಿದಪ್ಪಿದ 2

ರಾಕೇಂದುಮುಖಿಗೆರಾಹುಬಂದು ತೊಡರಿತುಈಕೆಗೆ ಮೋಸವೆಂದು ಎತ್ತಿದ ಬಂದುಜೋಕೆ ಮಾಡುವೆನೆಂದುಜಡಿದುಮಾರವೇಣಿಯಸಾಕಿ ಉಪಕಾರವೆಂದಸಚ್ಚಿದಾನಂದ3

ಎಲೆಲೆ ನಾಭಿ ಒಲ್ಪಕಾಯಳೆ ನಾವು ಮುಟ್ಟಿ ಕೆಂಪಿನಾಮೊಲೆ ಮೊಗ್ಗು ಕಪ್ಪಾದವೆಂದು ಮುಟ್ಟಿ ಅಹುದೆಂದುಅಲಕದ ಪೆಳಲ ಬಿಟ್ಟು ಅಹಿರಿಪು ನವಿಲುಥರಅಲರ್ಗಳಾರ್ಮುಡಿಗಟ್ಟಿದ ಅಂಜಬ್ಯಾಡೆಂದ 4

ಚದುರೇರೆನ್ನ ವಂಚಿಸಿ ಚಿನ್ನಿಪಾಲು ತನಿವಣ್ಣುಇದೀಗ ಬಚ್ಚಿಟ್ಟರೆಂದು ಯದುಕುಲೇಂದುಮುದ್ದು ಬಟುಗಲ್ಲದಿ ಮೊನೆವಲ್ಗಳ ನಾಟಿಸಿಅಧರಾಮೃತ ಪೀರಿದ ಅತಿಕೊಬ್ಬಿದ 5

ಮುಡಿಯ ತೋರಕ ಕೊಡ ಮಲಿ ಭಾರಕಬಡನಡು ಮುರಿವದೆಂದು ನಗೆಯಲ್ಲವೆಂದುಜಡಿತದೊಡ್ಯಾಣವ ಜಾಣೆ ಕಟಿಗೆ ಬಿಗಿದುಡಿಗೆ ಕರವನಿಡಿದ ದುಡುಕು ಮಾಡಿದ 6

ಮೃಗಮದಬಾವನ್ನ ಮಘಮಘಿಪ ಪೂಮಾಲೆಝಗಝಗಿಪ ಭೂಷಣವ ಜಾತಿ ಮೌಕ್ತಿಕವಮುಗುದೇರಿಗಿತ್ತ ಮೋಹಿಪ ಪ್ರಸನ್ನವೆಂಕಟಜಗಕೊಬ್ಬ ಚೆಲುವನಮ್ಮ ಜಯಿಸಿದ ನಮ್ಮ 7
********