Showing posts with label ಪಾಲಿಸೋ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ vijaya vittala. Show all posts
Showing posts with label ಪಾಲಿಸೋ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ vijaya vittala. Show all posts

Wednesday, 16 October 2019

ಪಾಲಿಸೋ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ankita vijaya vittala

ವಿಜಯದಾಸ
ಪಾಲಿಸೊ ಪತಿತಪಾವನ್ನಾ ನಿನ್ನ
ಪಾಲಿಗೆ ಬಂದೆ ಮೋಹನ್ನಾ -ಆಹಾ
ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ
ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ

ಬಂದೆನೊ ನಿನ್ನ ಹಂಬಲಿಸಿ ನಾನು
ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ
ಮುಂದಣ ನೆಲೆಗಾಣೆ ಗುಣಿಸಿ ಏನೇ
ನೆಂದು ಪೇಳಲೊ ವಿಸ್ತರಿಸಿ -ಆಹಾ
ಮಂದರಧರ ನಿನ್ನ ಮಂದಿರದ ದಾಸಿ
ಕಂದನು ನಾನೆಲೊ ಕಣ್ತೆರೆದು ನೋಡೊ 1

ಪೊಂದಿದೆ ಭಾರವವೊಹಿಸು ಪ್ರತಿ
ಬಂಧಕವ ಪರಿಹರಿಸು ನಿನ
ಗೊಂದಿಸುವೆ ಕೊಡು ಲೇಸು ಅತ್ಯಾ
ನಂದದಲ್ಲಿ ಚಿತ್ತವಿಡಿಸು -ಆಹಾ
ಇಂದಿರಾ ಮಂದಿರಾ ಸುಂದರ ಯೋಜನ
ಗಂಧಿಯ ಬಸುರಿಲಿ ಬಂದ ಭವದೂರಾ 2

ನಿಂದ್ಯ ಕರ್ಮವು ಮಾಡಿದವನ ದೂತ
ರಿಂದ ತರಿಸಿದೆ ತ್ರಿಭುವನಾ ಜಯ
ವೆಂದು ಕೊಂಡಾಡಲು ಜವನಾ ಭೀತಿ
ಯಿಂದ ಮಾಡಿದ ನಿನ್ನ ಸ್ತವನಾ -ಆಹ
ಒಂದಾನಂತವಾಗಿ ದ್ವಂದ್ವಪಾಪಗಳಿಗೆ
ನಿಂದಿರಬಲ್ಲವೆ ಸಂದರುಶನವಾಗೆ 3

ಕಂದುಕ ಪುಟಿ ಸೂತ ಬಳುಕಿ ದೈತ್ಯ
ವೃಂದ ಮೋಹಕವಾಗಿ ಸಿಲುಕಿ ಸುರ
ಸಂದೋಹಕೆ ನೀನೆ ಘಳಿಕಿ ನಿಜ
ವೆಂದು ಮಾನವರಿಗೆ ಬಳಿಕಿ -ಆಹಾ
ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ
ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4

ಹಂದಿ ನಾಯಿ ನರಿ ರಾಸಾ ಜನ್ಮ
ಬಂದರೆ ಎನಗದು ಹರುಷಾ ಬಹು
ಮುಂದುಂಟು ರಹಸ್ಯಾ ಮನಸಾಪೇಕ್ಷಾ
ಸಂದೇಹ ಮಾಡಿಸೊ ಶ್ರೀಶಾ -ಆಹಾ
ಯೋನಿ ಸಂದೀದ ಕಾಲಕ್ಕು
ಒಂದು ವಿಂಶತಿ ಮತ ಹೊಂದಿಸದಿರು ಹರಿ5

ಅಂಧಃಕಾರದೊಳೆನ್ನ ತಂದೆ ಇದ
ರಿಂದ ನಿನಗೇನೊ ಮುಂದೆ ಲಾಭ
ಬಂದಾದರೂ ಇಲ್ಲಾ ಇಂದೆ ಸುಖ
ಸಾಂದ್ರ ಕಡಿಮೆನೊ ಮುಂದೆ -ಆಹಾ 6

ಇಂದಿರಾವರ ರಾಮ ಶಾಮಾ ರಾಮ
ಚಂದ್ರ ಚತುರ ಸಾರ್ವಭೌಮಾ ದಿವ್ಯ
ಸಿರಿ ಉರಪ್ರೇಮಾ ಮುಚ
ಕುಂದ ಪಾಲಕ ನಿಸ್ಸೀಮಾ -ಆಹಾ
ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ
ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7

ದುಂದುಭಿ ಭೇರಿಯ ರಭಸಾ ಮಹಾ
ಬಂಧುರಾ ನೆರೆದ ವಿಶೇಷಾ
ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ
ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ
ಕುಂದಗೊಡದೆ ಬೊಮ್ಮನಂದದಿ ಪಥತೋರಿ8

ಹಿಂದಣ ಬಲವನ್ನು ಕಾಣೆ ನಾನು
ಅಂದು ನುಡಿದದ್ದು ಮಾಣೆ ಅನು
ಬಂಧಗಳಿಗೆ ಕಾಮಧೇನೆ ಸತ್ಯ
ಪತಿ ನೀನೆ -ಆಹಾ
ನಂದನ ಮನೋಹಂಸಾ 9

ಸಂದಣೆ ತೊಲಗದೆಂಬಿಯಾ ಆಹಾ
ಬಂದರೆ ಬರಲಿ ಎಂಬಿಯಾ ಇದೇ
ಸಂದಲಿ ಅನುಗಾಲ ನ್ಯಾಯಾ ಅನು
ಸಂಧಾನ ನಿನ್ನಲಿ ಪ್ರೀಯಾ -ಆಹಾ
ಇಂಧನದೊಳು ವಾಯು ವ್ಯಾಪಿಸಿದದ
ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10

ಕಂದರ್ಪ ಕೋಟಿ ಲಾವಣ್ಯ ಅರ
ವಿಂದ ನಯನ ಗುಣ ಗಣ್ಯ ದೀನ
ಮಂದಾರ ಸತತ ತಾರುಣ್ಯ ಸರಿ
ಬಂದಂತೆ ಮಾಡೊ ಕಾರುಣ್ಯ -ಆಹಾ
ವಂದೆದೈವವು ನಾನೆಂದ ಮುರಾರಿಯ
ಕೊಂದು ಬಿಸುಟಾಧೀರ ನಂದಕುಮಾರಕ11

ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ
ಕುಂದಣ ಪುಟದಂತೆ ವರಣಾ ಕಂಬು
ಕಂಧರ ಪೊಳಿಯಲಿ ವಚನಾ -ಆಹಾ
ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ
ವೊಂದಿಬರಲಿ ಮುಕುಂದಾ ಮುದ್ದುರಂಗಾ12

ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ
ಯೆಂದು ಕುಣಿಯೊ ಎನ್ನ ಧೊರಿಯೆ
ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ
ವೃಂದಾರಕ ಪುಷ್ಪಗರಿಯೆ -ಆಹಾ
ಇಂದಿನ ಉತ್ಸಾಹ ಇಂದ್ರಾದ್ಯರು ಪೂತು
ರೆಂದು ಪೊಗಳೆ ನಗೆಯಿಂದ ನೋಡುವದೆ 13

ಮಧ್ವರಮಣ ಪಾಪಿ ಭಕ್ತಿ jnaನ
ಸದ್ಧರ್ಮ ವೈರಾಗ್ಯಯುಕ್ತಿ ಕೊಡು
ಭುಕ್ತಿ ಇತ್ತು
ಮುದ್ರಧಾರನಾ ಮಾಡಿ ಮುಕ್ತಿ -ಆಹಾ
ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ
ಪತಿ 14

ಬಂಧೂರ ಕೀರ್ತಿ ಸಂಪನ್ನಾ ಕರಿ
ಬಂಧ ವಿಮೋಚನ್ನ ನಾ
ರಂದ ವರದ ಸುಪ್ರಸನ್ನಾ ಶತಾ
ನಂದ ಕಾನನವಾಸಾ ಘನ್ನಾ -ಆಹಾ
ಸಿಂಧುಜನಕನೆ ಪರಂಧಾಮತ್ರಯ ಸತ್ಯ
ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
*********