..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಬಾರೊ ಗೋವಿಂದ ಹೃತ್ಸರೋಜಕ್ಕೆ ಪ
ಧರಾದೇವಿ ರಮಣ ಸುರವರಾರ್ಚಿತ ಚರಣ ಶೃಂ-
ಗಾರ ಗುಣಪೂರ್ಣ ಮಾರಜನಕನೆ ಅ.ಪ
ಅಂಡಜವಾಹನ ಬ್ರಹ್ಮಾಂಡ ಗುಣಪೂರ್ಣ
ತೊಂಡರ ಪಾಲಿಪೊ ಪುಂಡರೀಕಾಕ್ಷನೆ 1
ತುಂಗವಿಕ್ರಮನೆ ಸಂಗೀತಲೋಲನೆ
ಮಂಗಳಮಹಿಮನೆ ಗಂಗೆಯ ಪಿತ ಹರಿ 2
ದುರಿತದೂರನೆ ಸಿರಿ ಸಹಿತ ನಿಲಯನೆ
ಕಿರೀಟಿ ಸಖ ಶೌರಿ ವಾರಿಜದಳ ನಯನ 3
ವಿಜಯ ರಾಮಚಂದ್ರವಿಠಲರಾಯನೆ
ಅಜವಂದಿತ ನಿನ್ನ ಭಜನೆಯ ಪಾಲಿಸೊ 4
***