Showing posts with label ಆವದೆನೆಗೆ ಪ್ರೀತಿ ಎಂದೆಂಬಿಯಾ ದೇವ ದೇವಕಿ vijaya vittala. Show all posts
Showing posts with label ಆವದೆನೆಗೆ ಪ್ರೀತಿ ಎಂದೆಂಬಿಯಾ ದೇವ ದೇವಕಿ vijaya vittala. Show all posts

Thursday, 17 October 2019

ಆವದೆನೆಗೆ ಪ್ರೀತಿ ಎಂದೆಂಬಿಯಾ ದೇವ ದೇವಕಿ ankita vijaya vittala

ವಿಜಯದಾಸ
ಆವದೆನೆಗೆ ಪ್ರೀತಿ ಎಂದೆಂಬಿಯಾ |
ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ಪ

ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ |
ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ |
ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ |
ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು 1

ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ |
ಚಂಡ ಯೋಗಗಳೊಲ್ಲೆ ಯಾಗವಲ್ಲೆ |
ಥಂಡ ಥÀಂಡದಿ ನಿನ್ನ ಕೊಂಡಾಡುವರ ಬಳಿಯ |
ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು 2

ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ |
ನೆಂದು ಪೇಳುವರ ಸಂಗತಿಯವಲ್ಲೆ |
ನಿತ್ಯ |
ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು 3

ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ |
ಜಿಸುವದುವಲ್ಲೆ ರಾಗಗಳುವಲ್ಲೆ |
ವಸುದೇವ ಸುತ ನಿನ್ನ ಪೆಸರು ಎಣಿಸುವವರ |
ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು 4

ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ |
ವನ್ನು ಮಾಡಿಸು ಬಿಡದೆ ಮನ್ನಿಸೆನ್ನ |
ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ |
ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು5
**********