Showing posts with label ವೆಂಕಟಾಚಲ ವಾಸಾ ವೇದಾಂತ ವೇದ್ಯಾತಂಕ ರಹಿತ vyasa vittala. Show all posts
Showing posts with label ವೆಂಕಟಾಚಲ ವಾಸಾ ವೇದಾಂತ ವೇದ್ಯಾತಂಕ ರಹಿತ vyasa vittala. Show all posts

Saturday, 28 December 2019

ವೆಂಕಟಾಚಲ ವಾಸಾ ವೇದಾಂತ ವೇದ್ಯಾತಂಕ ರಹಿತ ankita vyasa vittala

ವೆಂಕಟಾಚಲ ವಾಸಾ | ವೇದಾಂತ ವೇದ್ಯಾತಂಕ ರಹಿತ ವಿಲಾಸಾ | ವಿಧಿ ಭವ ಸುರಾರ್ಚಿತಪಂಕಜಾಂಘ್ರಿ ಸುಪೋಷಾ | ಲಕ್ಷ್ಮೀ ನಿವಾಸಾ ಪ

ಶಂಖ ಚಕ್ರ ವರಾಭಯಕರ ಶ | ಶಾಂಕ ವದನ ಕಳಂಕ ರಹಿತನೆಕಿಂಕರನ ಅವಗುಣಗಳೆಣಿಸದೆ | ಪಂಕಜಜ ಪರಿಪಾಲಕನೆ ಶ್ರೀ ಅ.ಪ.

ಶ್ರೀ ರಮಣ ಶೃಂಗಾರಾ | ಶುಭ ಗುಣ ಭರಿತ ಭವತಾರಕನೆ ತಾತ್ಸಾರಾ | ಮಾಡದಲೆ ತವ ಪರಿಚಾರಕರ ವಿಸ್ತಾರಾ | ಸೇವೆಯನು ಪಾಲಿಸೊವಾರ ವಾರಕೆ ಧೀರಾ | ದೇವಕಿ ಕುಮಾರಾ ||ತಾರತಮ್ಯನುಸಾರ ತತ್ವ ವಿ | ಚಾರದಿಂದಲಿ ವಿವಿಧ ಮೋಹದಿಪಾರಗಾಣಿಸೊ ಪಾರ್ಥಸಾರಥಿ | ಭಾರ ನಿನ್ನದೊ ಭಕ್ತವತ್ಸಲ ||ಕೌರವಾಂತಕ ಕಾರುಣಿಕ ಪಂ | ಕೇರುಹೇಕ್ಷ ಪರಾವರಜ್ಞ ಮು-ರಾರಿ ಮುಕ್ತ ವಿಹಾರ ಮುನಿ ಪರಿ | ವಾರ ಮಾಮನೊಹಾರ ಮೂರುತಿ1

ತಾಟಕಾಂತಕ ರಾಮಾ | ತಡಮಾಡದಲೆ ಶಶಿಜೂಟನುಳುಹಿದ ಪ್ರೇಮಾ | ಭವ ಸಾಗರದೊಳುಪಾಟು ಬಡುವೆನೊ ಕಾಮಾ | ಕ್ರೋಧಾದಿಗಳ ಆರಾಟ ಮಗ್ಗಿಸೊ ಸೋಮಾ | ಸತ್ಕುಲ ಲಲಾಮ ||ಹಾಟಕಾಂಬರ ಹನುಮವಂದ್ಯ ವಿ | ರಾಟ ಮೂರುತಿ ವಿಷ್ಣು ತುರಿಯ ಲಲಾಟಕೆಸೆದನ ಮನ್ನಿಸಿದ ಮಧು | ಕೈಟಭಾರಿ ಮಹಾಮಹಿಮ ಗುಣ ||ಕೂಟದಿಂದಲಿ ಜಗವ ನಿರ್ಮಿಸಿ | ಹಾಟಕೋದರ ಹರ ಪ್ರಮುಖ್ಯರನೀಟು ಸೂತ್ರದಿ ಈಟದಿಂದದಿ | ಚೂಟದಲಿ ಚೆಲ್ಲಾಟವಾಡಿದ 2

ಜನನ ಮರಣ ವಿದೂರಾ | ಜಾನಕಿ ಮನೋಹರಪ್ರಣತ ಜನ ಮಂದಾರಾ | ಪ್ರಾಕೃತ ರಹಿತ ಚಿದ್ಘನ ಶರೀರ ಅಪಾರಾ | ಕರ್ಮಗಳಿಗೊಪ್ಪಿಸಿದಣಿಸುವರೆ ಯದುವೀರಾ | ಪರ ತತ್ವ ಸಾರಾ ||ವನಜ ಜಾಂಡಾ ವರೂಥಖಿಳ ಸ | ಜ್ಜನ ಶಿರೋಮಣಿ ಸಾತ್ವತಾಂಪತಿಮಣಿದು ಬೇಡುವರೊಡೆಯ ಮದ್ ಹೃದ್ | ವನಜ ದಿನಮಣಿ ದಿತಿಸುತಾಂತಕ ||ಜನುಮ ಜನ್ಮಾರ್ಚಿತ ಕಲುಷ ಕಾ | ನನವ ಖಂಡಿಸೊ ವ್ಯಾಸ ವಿಠ್ಠಲಮನ ವಚನ ಕಾಯದಲಿ ನಮಿಸುವೆ | ಘನ ಮಹಿಮ ಗಜವರದ ಸುಂದರ 3
**********