Showing posts with label ಶರಣ ಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ gurumahipati. Show all posts
Showing posts with label ಶರಣ ಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ gurumahipati. Show all posts

Wednesday, 1 September 2021

ಶರಣ ಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಶರಣಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ಪ 


ಹಾರದ ನಿಗದಿಯ ಬಿಟ್ಟು ಸೋತವನಾಗಿ ವ್ಯಾಸ ಭೀಷ್ಮನ ಗೆಲಿಸಿದೆ ಮುಕುಂದಾ 1 

ಹಗಲೇ ಇರಳ ಮಾಡಿ ಸೈಂಧವನಸುವನು ತೆಗಿಸಿ ನರನ ವಾಸಿ ಕೊಂಡ್ಯೋ ಮುಕುಂದಾ 2 

ಶರಧಿಯಂಜಿಸಿಕೊಂಡು ಪಕ್ಷಿಯ ಶಿಶುವಾಗಿ ಗರುಡನ ವಾಸಿಯ ಕೊಂಡ್ಯೊ ಮುಕುಂದಾ 3 

ದಶಜನುಮವತಾಳಿ ಮುನಿಯ ಬೆದರಿಸ್ಯಂಬ ರಿಕ್ಷಣ ಫಲನಡಿಸಿದೆ ಮುಕುಂದಾ 4 

ಗುರು ಮಹಿಪತಿ ಸ್ವಾಮಿ ಭಕ್ತ ವತ್ಸಲನೆಂಬ ಬಿರುದುವಾಳಿದರೆಂದು ಸಲಹೋ ಮುಕುಂದಾ 5

***