Wednesday, 1 September 2021

ಶರಣ ಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಶರಣಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ಪ 


ಹಾರದ ನಿಗದಿಯ ಬಿಟ್ಟು ಸೋತವನಾಗಿ ವ್ಯಾಸ ಭೀಷ್ಮನ ಗೆಲಿಸಿದೆ ಮುಕುಂದಾ 1 

ಹಗಲೇ ಇರಳ ಮಾಡಿ ಸೈಂಧವನಸುವನು ತೆಗಿಸಿ ನರನ ವಾಸಿ ಕೊಂಡ್ಯೋ ಮುಕುಂದಾ 2 

ಶರಧಿಯಂಜಿಸಿಕೊಂಡು ಪಕ್ಷಿಯ ಶಿಶುವಾಗಿ ಗರುಡನ ವಾಸಿಯ ಕೊಂಡ್ಯೊ ಮುಕುಂದಾ 3 

ದಶಜನುಮವತಾಳಿ ಮುನಿಯ ಬೆದರಿಸ್ಯಂಬ ರಿಕ್ಷಣ ಫಲನಡಿಸಿದೆ ಮುಕುಂದಾ 4 

ಗುರು ಮಹಿಪತಿ ಸ್ವಾಮಿ ಭಕ್ತ ವತ್ಸಲನೆಂಬ ಬಿರುದುವಾಳಿದರೆಂದು ಸಲಹೋ ಮುಕುಂದಾ 5

***


No comments:

Post a Comment