Wednesday, 1 September 2021

ಗುರುರಾಯ ನೀನೆ ಧ್ವರೀ ಧ್ವರೀ ಪರಮ ಭಾಗವತರ ನೀ ಮರೆಯದೆ ಪೊರೆವಂಥ ankita gurujagannatha vittala

 ..

ಗುರುರಾಯ ನೀನೆ ಧ್ವರೀ ! ಧ್ವರೀ ! ಪ


ಪರಮ ಭಾಗವತರ ನೀ ಮರೆಯದೆ ಪೊರೆವಂಥ ಅ.ಪ


ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು

ಪರಿಪರಿ ಸುಖಗಳ ಮರೆಯದೆ ಕೊಡುವಂಥ 1


ಶರಣ ಜನರಪ - ಮರಣ ಕಳೆದು ಸ್ಥೂಲ

ಹರಣರಕ್ಷಿಸಿ ಸುಖ - ಅರಣದಲ್ಲಿಡುವಂಥ 2


ಅನ್ಯರಿಗಳವಡದ - ಘನ್ನ ಮಹಿಮನೆ ನಿನ್ನ

ಮನ್ನದಿ ಭಜಿಪ ಜನರ - ಚನ್ನವಾಗಿ ಪೊರೆವಂಥ 3


ರಾಜ ಚೋರ ವ್ಯಾಘ್ರ - ರಾಜ ವೃಶ್ಚಿಕ ಸರ್ಪ

ರಾಜಿ ನಕÀ್ರದ ಭಯ - ಮಾಜಿಸಿ ಪೊರೆವೊನಿಂಥಾ 4


ಭೂತಳದೊಳಗತಿ - ಖ್ಯಾತನಾಗಿ ಸದಾ

ದಾತ ಗುರು ಜಗನ್ನಾಥ ವಿಠಲ ನೊಲಿಸಿದಂಥ 5

***


No comments:

Post a Comment