Showing posts with label ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು purandara vittala. Show all posts
Showing posts with label ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು purandara vittala. Show all posts

Thursday, 5 December 2019

ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು purandara vittala

ರಾಗ ಗೌಳಿ ಅಟತಾಳ 

ಮಂಧರಧರನು ಗೋವಿಂದ
ಮಂಧರ ಧರ ಗೋವಿಂದನು ಕಾ-
ಳಿಂದಿಯಲಿ ನಲಿದಾಡುತ ಬಂದ ||ಪ ||

ಕಸ್ತೂರಿತಿಲಕ ನೊಸಲಲಿ ಎಸೆಯೆ
ಮೊತ್ತದ ಗೋವಳರೊಡನೆ ಕೊಳಲೂ-
ದುತ್ತ ತುತ್ತುರು ತುರುರೆನುತ ||

ಕೊಂಬು ಕೊಳಲು ಬೆನ್ನಲಿ ಬಲು ಮೆರೆಯೆ
ರಂಭೆಯರು ಸಂಭ್ರಮದಿಂದ ನೋಡೆ
ಕೊಂಬಿನ ಸ್ವರದಲಿ ಆಡುತ್ತ ಪಾಡುತ್ತ ||

ಸುರರು ಕಿನ್ನರು ಕಿಂಪುರುಷರೆಂಬಲ್ಲಿ
ಸುರಪುಷ್ಪಂಗಳ ಮಳೆಯನು ಸುರಿಯೆ
ಗುರು ಪುರಂದರವಿಠಲನಾಡಿದನಂತೆ ||
***

pallavi

mandhara dharanu gOvinda mandhara dhara gOvindanu kALindiyali nalidADuta banda

caraNam 1

kastUri tilaka nosalali eseya mottada kovaLroDane koLalU dutta tutturu tururenuta

caraNam 2

kombu koLalu bennali balu mereya rambheyaru sambhramadinda nODe kombina svaradali Adutta pADutta

caraNam 3

suraru kinnaru kimpuruSaremballi sura puSpangaLa maLeyanu suriya guru purandara viTTalanADidanante
***