Showing posts with label ಭಕುತಿಯ ಪಾಲಿಸು ಜೀಯಾ ಮುಂದೆ vijaya vittala. Show all posts
Showing posts with label ಭಕುತಿಯ ಪಾಲಿಸು ಜೀಯಾ ಮುಂದೆ vijaya vittala. Show all posts

Thursday, 17 October 2019

ಭಕುತಿಯ ಪಾಲಿಸು ಜೀಯಾ ಮುಂದೆ ankita vijaya vittala

ವಿಜಯದಾಸ
ಭಕುತಿಯ ಪಾಲಿಸು ಜೀಯಾ ಮುಂದೆ
ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ

ತನುವೆ ನಿನ್ನಾಧೀನವೆನಿಸು ಇದು
ಅನುದಿನ ಕೊಡು ಏಕಪ್ರಕಾರ ಮನಸು
ಧನ ವಡವೆಯ ಕಂಡ ಕನಸು ಎಂದು
ನಿತ್ಯ ನಿನ್ನಂಘ್ರಿ ನೆನಸು 1

ತತ್ವದ ಮತದೊಳಗಿರುಸು ಪುಶಿ
ಉತ್ತರ ಮತವೆಂಬ ಮಾರ್ಗವ ಮೆರೆಸು
ಉತ್ತಮರೊಳಗೆನ್ನನಿರಿಸು ಭವ
ವತ್ತುವ ನಿನ್ನ ನಾಮಮೃತ ಸುರಿಸು 2

ಶ್ರವಣ ಮನನ ಧ್ಯಾನವೀಯೋ ಎನ್ನ
ಅವಗುಣವೆಣಿಸದೆ ಕರುಣಾಳು ಕಾಯೊ
ಅವಸಾನದಲಿ ನೀನೆ ಗತಿಯೊ ತ್ರೈ
ಭುವನೇಶ ವಿಜಯವಿಠ್ಠಲ ನೀ ದೊರೆಯೋ 3
********