RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲಿಸೊ ದೇವ ಮೂಲೋಕ ಕಾವ ಎಲ್ಲರೊಳ ಗೀವ ಶ್ರೀ ಲಕ್ಷುಮಿಯ ಜೀವ ಪ
ಮುನಿಜನ ಪಾಲ ಘನಸುಖಲೋಲ ಅನಾಥರನುಕೂಲ ದೀನದಯಾಳ 1
ಕರುಣಾಸಾಗರ ಪರಮ ಉದಾರ ದುರಿತ ಸಂಹಾರ 2
ಸಿರಿಲೋಲ ಭೂಷಣ ಹರಿನಾರಾಯಣ ತರಳ ಮಹಿಪತಿ ಪ್ರಾಣ ಹೊರಿಯೋ ನೀ ಪೂರ್ಣ 3
***