Showing posts with label ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನಮ್ಮಪ್ಪ ಕಾಯಬೇಕು purandara vittala TAPPUGALELLA NEENOPPIKOLLO NAMMMAPPA KAYABEKU. Show all posts
Showing posts with label ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನಮ್ಮಪ್ಪ ಕಾಯಬೇಕು purandara vittala TAPPUGALELLA NEENOPPIKOLLO NAMMMAPPA KAYABEKU. Show all posts

Saturday, 4 December 2021

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನಮ್ಮಪ್ಪ ಕಾಯಬೇಕು purandara vittala TAPPUGALELLA NEENOPPIKOLLO NAMMMAPPA KAYABEKU



ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನ-
ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||ಪ||

ಸತಿಸುತರಿಗೆ ಸಂಸಾರ ಬಲೆಗೆ ಅತಿ
ಮತಿಹೀನನಾಗಿ ಸಿಕ್ಕೆ ಆಸೆಗಳಿಗೆ
ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ , ಮುಂದೆ
ಗತಿ ಯಾವುದಯ್ಯ ಶ್ರೀಪತಿ ಎನಗೆ ||

ಬಿಸಿಲು ಮಳೆ ಬಿರುಗಾಳಿಯೊಳು , ಬಲು
ದೆಸೆಗೆಟ್ಟೆ ತಿರುಗಿ ದೇಶದೇಶಗಳು
ಹಸಿವು ತೃಷೆಗಳು ಬಲು ಬಾಧಿಸಲು , ಬಹು
ಹುಸಿಯನಾಡಿದೆನಯ್ಯ ಹುಟ್ಟು ಮೊದಲು ||

ಸ್ನಾನ ಸಂಧ್ಯಾನವನೊಂದನರಿಯೆ , ಅನ್ನ-
ಪಾನಗಳನು ನಾನೊಮ್ಮೆ ಮರೆಯೆ
ಹೀನರ ಸಂಗ ಎಂದೆಂದು ತೊರೆಯೆ , ಸು-
ಜ್ಞಾನಿಗಳನಿತ್ತ ಬಾ ಎಂದು ಕರೆಯೆ ||

ಜಪತಪದಲಿ ರೀತಿ ಭಾಷೆಯಿಲ್ಲ ಎ-
ನ್ನಪರಾಧಗಳಿಗಿನ್ನು ಎಣಿಕೆಯಿಲ್ಲ
ಚಪಲತನದಲಿ ಕಾಲ ಕಳೆದೆನಲ್ಲ , ಸ್ವಾಮಿ
ಕಪಟನಾಟಕ ನೀನೆ ಬಲ್ಲೆಯಲ್ಲ ||

ಗಂಗೆ ಅಗ್ರೋದಕಗಳ ತಂದು ಸ್ನಾ-
ನಂಗಳ ಮಾಡಿಸಲಿಲ್ಲ ಎಂದು
ಹೊಂಗೇದಿಗೆ ಪುಷ್ಪವನೊಂದು ಶ್ರೀ-
ರಂಗಗರ್ಪಿಸಲಿಲ್ಲ ಕಾಯೊ ಬಂದು ||

ಗಂಧಾಕ್ಷತೆ ಪುಷ್ಪಗಳಿಂದ
ಒಂದು ದಳ ಶ್ರೀತುಳಸಿಯಿಂದ
ಇಂದಿರೇಶನ ಅರ್ಚಿಸದರಿಂದ , ಬಹು
ನೊಂದು ದೂರಾದೆ ಸದ್ಗತಿಯಿಂದ ||

ಪೀತಾಂಬರಾದಿ ವಸ್ತ್ರಗಳಿಂದ , ದಿವ್ಯ
ನೂತನವಾದ ಆಭರಣದಿಂದ
ಪ್ರೀತಿಪಡಿಸಲಿಲ್ಲಾದರದಿಂದ
ಹೇ, ಸೀತಾಪತೇ ಕೃಷ್ಣ ಹರಿಮುಕುಂದ ||

ಧೂಪಾರತಿಯ ನಾ ಮಾಡಲಿಲ್ಲ , ಒಂದು
ದೀಪವನಾದರೂ ಹಚ್ಚಲಿಲ್ಲ
ಈ ಪರಿ ಕಳೆಯಿತೀ ಜನ್ಮವೆಲ್ಲ , ದೇವ
ಆಪದ್ಭಾಂದವ ಕಾಯೋ ಲಕ್ಷ್ಮೀನಲ್ಲ ||

ಸೋಪಸ್ಕರವನು ಒಂದು ಮಾಡದೆ , ಎಲ್ಲ
ಗೋಪಾಲಕೃಷ್ಣಗೆ ಅರ್ಪಿಸದೆ
ಪಾಪಕರ್ಮಕ್ಕೆ ನಾ ಗುರಿಯಾದೆ , ಸ್ವಾಮಿ
ಶ್ರೀಪತಿ ಕಾಯೊ ಎನ್ನ ಕೈ ಬಿಡದೆ ||

ಪಾಯಸ ಪಂಚಭಕ್ಷ್ಯಗಳಿಂದ
ಆಯತವಾದ ಶಾಕಗಳಿಂದ
ತೋಯ ಶಾಲ್ಯಾನ್ನ ಗೋಘೃತದಿಂದ , ಕೃಷ್ಣ-
ರಾಯನರ್ಚಿಸಲಿಲ್ಲ ಭಕ್ತಿಯಿಂದ ||

ಮಂಗಳಾರತಿಯನು ನಾ ಮಾಡಲಿಲ್ಲ , ಜಯ
ಮಂಗಳವೆಂದು ನಾ ಪಾಡಲಿಲ್ಲ
ಕಂಗಳಿಂದಲಿ ನಿನ್ನ ನೋಡಲಿಲ್ಲ, ಮುದ್ದು
ರಂಗನೆ ಬಾ ಎಂದು ಬೇಡಲಿಲ್ಲ ||

ಹರಿಯ ಪ್ರದಕ್ಷಿಣೆ ಮಾಡಲಿಲ್ಲ , ನರ-
ಹರಿಯ ಪಾದಕೆ ನಾ ಬೀಳಲಿಲ್ಲ
ಹರಿದಿನದುಪವಾಸ ಮಾಡಲಿಲ್ಲ , ಶ್ರೀ-
ಹರಿದಾಸರೊಡನೆ ನಾ ಕೂಡಲಿಲ್ಲ ||

ಅತಿಥಿಗಳೆಂದು ಬಂದರೆ ಮನೆಗೆ
ಗತಿಯಿಲ್ಲ ಕೂಡದು ಎಂದೆ ಎನಗೆ
ಯತಿಗಳ ಕೂಡ ನಿಂದಿಸಿದೆ ಕೊನೆಗೆ , ಶ್ರೀ-
ಪತಿ ದೃಷ್ಟಿಯಿಡು ಈ ಪಾಪಿ ಕಡೆಗೆ ||

ಹೋಮಾರ್ಚನೆ ಔಪಾಸನೆಯೆಲ್ಲ, ಎಂದೂ
ನೇಮದಿಂದಲಿ ನಾ ಮಾಡಲಿಲ್ಲ
ಕಾಮಾತುರದಿ ಕಂಡಕಂಡಲ್ಲೆಲ್ಲ , ರಾಮ
ಭ್ರಾಮಕನಾಗಿ ತಿರುಗಿದೆನಲ್ಲ ||

ಎಷ್ಟು ಹೇಳಲಿ ಅವಗುಣಗಳೆಲ್ಲ , ಅವು
ಅಷ್ಟು ಇಷ್ಟು ಎಂದು ಎಣಿಕೆಯಿಲ್ಲ
ದೃಷ್ಟಿಯಿಂದಲಿ ನೋಡೋ ದೀನವತ್ಸಲ, ಸರ್ವ-
ಸೃಷ್ಟಿಗೊಡೆಯ ಪುರಂದರವಿಟ್ಠಲ ||
***

ರಾಗ ನಾದನಾಮಕ್ರಿಯೆ ಅಟತಾಳ

pallavi

tappugaLella nInobbikoLLo nammappa kAyabEku timmappa nIne

caraNam 1

sati sutarige samsAra balage ati mati hInanAgi sikki AsegaLige
mitigANenayya enna pApagaLige munde gati yAvudayya shrIpati enage

caraNam 2

bisilu maLe birugALiyoLu balu dese geTTu tirugi dEsha dEshagaLu
hasivu truSegaLu bahu bAdhisalu bahu husiyADidenayya huTTu modalu

caraNam 3

snAna sandhyAnavaLondanariye anna pAnakagaLanu nAnomme mareye
hInara sanga endendu doreye sujnAnagaLanittu bA endu kareye

caraNam 4

japatapadali rIti bhASeyilla ennaparAdhagaLiginnu eNikeyilla
capalatanadi kAla kaLedenalla svAmi kapaTa nATaka nInE balleyalla

caraNam 5

gange akrOdakagaLa tandu snAnangaLa mADisalilla endu
hongEdige puSpavanondu shrIranga garbisalilla kAyo bandu

caraNam 6

gandhAkSate puSpangaLinda bare ondu daLa shrI tuLasiyinda
indirEshana arcisadarinda bahu nondu dUrAde sadgatiyinda

caraNam 7

pItAmbarAdi vastragaLinda divya nUtanavAda AbharaNadinda
prIti paDisalillAdradinda hE sItApatE krSNa hari mukunda

caraNam 8

dhUpAratiya nA mADalilla ondu dIpavanAdaru haccalilla
I pari kaLeyitI janmavella dEva ApadbAndhava kAyo lakSmInalla

caraNam 9

sOpaskaravanu ondu mADade ella gOpAlakrSNage arpisade
pApa karmake nA kuriyAde svAmi shrIpati kAyo enna kai biDade

caraNam 10

pAysa panca pakSagaLinda AyatavAda shAkagaLinda
tOya shAlyanna gO kharutadinda krSNa rAyanarcisalilla bhaktiyinda

caraNam 11

mangaLAratiyanu mADalilla jaya mangaLavendu nA pADalilla
kangaLindali ninna nODalilla muddu rangane bA endu bEDalilla
1
caraNam 2

hariya pradakSiNe mADalilla narahariya pAdake nA bILalilla
haridinadupavAsa mADalilla shrI haridAsaroDane nA kUDalilla
1
caraNam 3

atithigaLendu bndare manege Enu gatiyilla kUDadu yende enage
yatigaLa kUDa nindiside konege shrIpati drSTiyiDu I pApi kaDege
1
caraNam 4

hOmArcane jeLapAsaneyella endU nEmadindali nA mADalilla
kAmAturadi kaNDa kaNDallellA rAma bhrAmakanAgi tirugidenalla
1
caraNam 5

eSTu hELali avaguNagaLella avu aSTu iSTu endu eNikeyilla
drSTiyindali nODo dInavatsala sarva shrSTikoDeya purandara viTTala 
***

ಪುರಂದರದಾಸರು
ತಪ್ಪುಗಳನೆಲ್ಲ ನೀನೊಪ್ಪಿ ಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆ ಪ

ಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1

ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2

ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3

ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4

ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5

ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6

ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7

ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8

ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9

ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10

ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11

ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12

ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
*****