Saturday, 4 December 2021

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನಮ್ಮಪ್ಪ ಕಾಯಬೇಕು purandara vittala TAPPUGALELLA NEENOPPIKOLLO NAMMMAPPA KAYABEKU




RESTART MOBILE IF AUDIO IS NOT PLAYING  CLICK-> HOME

or just scroll down for other devaranama 

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನ-
ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||ಪ||

ಸತಿಸುತರಿಗೆ ಸಂಸಾರ ಬಲೆಗೆ ಅತಿ
ಮತಿಹೀನನಾಗಿ ಸಿಕ್ಕೆ ಆಸೆಗಳಿಗೆ
ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ , ಮುಂದೆ
ಗತಿ ಯಾವುದಯ್ಯ ಶ್ರೀಪತಿ ಎನಗೆ ||

ಬಿಸಿಲು ಮಳೆ ಬಿರುಗಾಳಿಯೊಳು , ಬಲು
ದೆಸೆಗೆಟ್ಟೆ ತಿರುಗಿ ದೇಶದೇಶಗಳು
ಹಸಿವು ತೃಷೆಗಳು ಬಲು ಬಾಧಿಸಲು , ಬಹು
ಹುಸಿಯನಾಡಿದೆನಯ್ಯ ಹುಟ್ಟು ಮೊದಲು ||

ಸ್ನಾನ ಸಂಧ್ಯಾನವನೊಂದನರಿಯೆ , ಅನ್ನ-
ಪಾನಗಳನು ನಾನೊಮ್ಮೆ ಮರೆಯೆ
ಹೀನರ ಸಂಗ ಎಂದೆಂದು ತೊರೆಯೆ , ಸು-
ಜ್ಞಾನಿಗಳನಿತ್ತ ಬಾ ಎಂದು ಕರೆಯೆ ||

ಜಪತಪದಲಿ ರೀತಿ ಭಾಷೆಯಿಲ್ಲ ಎ-
ನ್ನಪರಾಧಗಳಿಗಿನ್ನು ಎಣಿಕೆಯಿಲ್ಲ
ಚಪಲತನದಲಿ ಕಾಲ ಕಳೆದೆನಲ್ಲ , ಸ್ವಾಮಿ
ಕಪಟನಾಟಕ ನೀನೆ ಬಲ್ಲೆಯಲ್ಲ ||

ಗಂಗೆ ಅಗ್ರೋದಕಗಳ ತಂದು ಸ್ನಾ-
ನಂಗಳ ಮಾಡಿಸಲಿಲ್ಲ ಎಂದು
ಹೊಂಗೇದಿಗೆ ಪುಷ್ಪವನೊಂದು ಶ್ರೀ-
ರಂಗಗರ್ಪಿಸಲಿಲ್ಲ ಕಾಯೊ ಬಂದು ||

ಗಂಧಾಕ್ಷತೆ ಪುಷ್ಪಗಳಿಂದ
ಒಂದು ದಳ ಶ್ರೀತುಳಸಿಯಿಂದ
ಇಂದಿರೇಶನ ಅರ್ಚಿಸದರಿಂದ , ಬಹು
ನೊಂದು ದೂರಾದೆ ಸದ್ಗತಿಯಿಂದ ||

ಪೀತಾಂಬರಾದಿ ವಸ್ತ್ರಗಳಿಂದ , ದಿವ್ಯ
ನೂತನವಾದ ಆಭರಣದಿಂದ
ಪ್ರೀತಿಪಡಿಸಲಿಲ್ಲಾದರದಿಂದ
ಹೇ, ಸೀತಾಪತೇ ಕೃಷ್ಣ ಹರಿಮುಕುಂದ ||

ಧೂಪಾರತಿಯ ನಾ ಮಾಡಲಿಲ್ಲ , ಒಂದು
ದೀಪವನಾದರೂ ಹಚ್ಚಲಿಲ್ಲ
ಈ ಪರಿ ಕಳೆಯಿತೀ ಜನ್ಮವೆಲ್ಲ , ದೇವ
ಆಪದ್ಭಾಂದವ ಕಾಯೋ ಲಕ್ಷ್ಮೀನಲ್ಲ ||

ಸೋಪಸ್ಕರವನು ಒಂದು ಮಾಡದೆ , ಎಲ್ಲ
ಗೋಪಾಲಕೃಷ್ಣಗೆ ಅರ್ಪಿಸದೆ
ಪಾಪಕರ್ಮಕ್ಕೆ ನಾ ಗುರಿಯಾದೆ , ಸ್ವಾಮಿ
ಶ್ರೀಪತಿ ಕಾಯೊ ಎನ್ನ ಕೈ ಬಿಡದೆ ||

ಪಾಯಸ ಪಂಚಭಕ್ಷ್ಯಗಳಿಂದ
ಆಯತವಾದ ಶಾಕಗಳಿಂದ
ತೋಯ ಶಾಲ್ಯಾನ್ನ ಗೋಘೃತದಿಂದ , ಕೃಷ್ಣ-
ರಾಯನರ್ಚಿಸಲಿಲ್ಲ ಭಕ್ತಿಯಿಂದ ||

ಮಂಗಳಾರತಿಯನು ನಾ ಮಾಡಲಿಲ್ಲ , ಜಯ
ಮಂಗಳವೆಂದು ನಾ ಪಾಡಲಿಲ್ಲ
ಕಂಗಳಿಂದಲಿ ನಿನ್ನ ನೋಡಲಿಲ್ಲ, ಮುದ್ದು
ರಂಗನೆ ಬಾ ಎಂದು ಬೇಡಲಿಲ್ಲ ||

ಹರಿಯ ಪ್ರದಕ್ಷಿಣೆ ಮಾಡಲಿಲ್ಲ , ನರ-
ಹರಿಯ ಪಾದಕೆ ನಾ ಬೀಳಲಿಲ್ಲ
ಹರಿದಿನದುಪವಾಸ ಮಾಡಲಿಲ್ಲ , ಶ್ರೀ-
ಹರಿದಾಸರೊಡನೆ ನಾ ಕೂಡಲಿಲ್ಲ ||

ಅತಿಥಿಗಳೆಂದು ಬಂದರೆ ಮನೆಗೆ
ಗತಿಯಿಲ್ಲ ಕೂಡದು ಎಂದೆ ಎನಗೆ
ಯತಿಗಳ ಕೂಡ ನಿಂದಿಸಿದೆ ಕೊನೆಗೆ , ಶ್ರೀ-
ಪತಿ ದೃಷ್ಟಿಯಿಡು ಈ ಪಾಪಿ ಕಡೆಗೆ ||

ಹೋಮಾರ್ಚನೆ ಔಪಾಸನೆಯೆಲ್ಲ, ಎಂದೂ
ನೇಮದಿಂದಲಿ ನಾ ಮಾಡಲಿಲ್ಲ
ಕಾಮಾತುರದಿ ಕಂಡಕಂಡಲ್ಲೆಲ್ಲ , ರಾಮ
ಭ್ರಾಮಕನಾಗಿ ತಿರುಗಿದೆನಲ್ಲ ||

ಎಷ್ಟು ಹೇಳಲಿ ಅವಗುಣಗಳೆಲ್ಲ , ಅವು
ಅಷ್ಟು ಇಷ್ಟು ಎಂದು ಎಣಿಕೆಯಿಲ್ಲ
ದೃಷ್ಟಿಯಿಂದಲಿ ನೋಡೋ ದೀನವತ್ಸಲ, ಸರ್ವ-
ಸೃಷ್ಟಿಗೊಡೆಯ ಪುರಂದರವಿಟ್ಠಲ ||
***

tappugaḷella nīnoppikoḷḷo n-
ammappa kāyabēku timmappa nīne || pa ||

satisutarige saṃsāra balege ati | matihīnanāgi sikke āsegaḷige |
mitigāṇenayya enna pāpagaḷige , munde | gati yāvudayya śrīpati enage || 1 ||

bisilu maḷe birugāḷiyoḷu , balu | desageṭṭe tirugi dēśadēśagaḷu |
hasivu tṛṣēgaḷu balu bādhisalu , bahu | husiyānāḍidenayya huṭṭu modalu || 2 ||

snāna sandhyānavanondanariye , anna- | pānagaḷanu nānomme mareye |
hīnara saṅga endendu toreye , su- | jñānigaḷanitta bā endu kareye || 3 ||

japatapadali rīti bhāṣeyilla e- | nnaparādhagaḷiginnu eṇikeyilla |
capalatanadali kāla kaḷedenalla , svāmi | kapaṭanāṭaka nīne balleyalla || 4 ||

gaṅge agrōdakagaḷa tandu snā- | naṅgaḷa māḍisalilla endu |
hoṅgēdige puṣpavanondu śrī- | raṅgagarpisalilla kāyo bandu || 5 ||

gandhākṣate puṣpagaḷinda | ondu daḷa śrītuḷasiyinda |
indirēśana arcisadarinda , bahu | nondu dūrāde sadgatiyinda || 6 ||

pītāmbarādi vastragaḷinda , divya | nūtanavāda ābharaṇadinda |
prītipaḍisalillādara dinda | hē, sītāpatē kṛṣṇa harimukunda || 7 ||

dhūpāratiya nā māḍalilla , ondu | dīpavanādarū haccālilla |
ī pari kaḷeyitī janmavella , dēva | āpadbhāndava kāyo lakṣmīnalla || 8 ||

sōpaskaravanu ondu māḍade , ella | gōpālakṛṣṇage arpisade |
pāpakarmakke nā guriyāde , svāmi | śrīpati kāyo enna kai biḍade || 9 ||

pāyasa pañcabhakṣyagaḷinda | āyatavāda śākagaḷinda |
tōya śālyānna gōghṛtadinda , kṛṣṇa- | rāyanarcisalilla bhaktiyinda || 10 ||

maṅgaḷāratiyanu nā māḍalilla , jaya | maṅgaḷavendu nā pāḍalilla |
kaṅgaḷandali ninna nōḍalilla, muddu | raṅgane bā endu bēḍalilla || 11 ||

hariya pradakṣiṇe māḍalilla , nara- | hariya pādake nā bīḷalilla |
haridinadupavāsa māḍalilla , śrī- | haridāsaroḍane nā kūḍalilla || 12 ||

atithigaḷendu bandare manege | gatiyilla kūḍadu ende enage |
yatigaḷa kūḍa nindiside konege , śrī- | pati dṛṣṭiyiḍu ī pāpi kaḍege || 13 ||

hōmārcane aupāsaneyella, endū | nēmadindali nā māḍalilla |
kāmāturadi kanḍakanḍallella , rāma | bhrāmakanāgi tirugidenalla || 14 ||

eṣṭu hēḷali avaguṇagaḷella , avu | aṣṭu iṣṭu endu eṇikeyilla |
dṛṣṭiyindali nōḍo dīnavatsala, sarva- | sṛṣṭigoḍeya purandaraviṭṭhala || 15 ||
***

To recite these verses with the correct phonetic flow, follow these six guidelines:

Vowel Duration: Pronounce vowels with a bar (ā, ē, ī, ō, ū) for two full beats (e.g., ā as in "fār" or ī as in "shēēt") and unmarked vowels for one short beat.

Soft Dental 't' and 'd': Keep the tongue touching the back of the upper front teeth for a soft, thin sound in words like Pati or Daya.

Hard Retroflexes: For letters with a dot underneath (ṭ, ḍ, ṇ, ḷ), curl the tongue upward to touch the roof of the mouth (e.g., Vithala or Nōḍi).

Aspirated Puffs: When a consonant is followed by 'h' (bh, dh, gh, th), release a distinct puff of air (e.g., Bhakti sounds like B-hakti).

Nasal Resonance: Treat the ṁ or ṅ as a resonant nasal sound that blends into the next syllable, similar to a soft "m" or the "ng" in "sing."

The Visarga (ḥ): When a word ends in ḥ, add a very soft, ghost-like echo of the preceding vowel (e.g., Namaḥ sounds like Namah-a).
***

ಪುರಂದರದಾಸರ ಈ ಅದ್ಭುತ ಕೃತಿಯು ಒಬ್ಬ ಭಕ್ತನು ಭಗವಂತನ ಮುಂದೆ ಮಾಡುವ 'ಆತ್ಮನಿವೇದನೆ' ಅಥವಾ 'ಪಶ್ಚಾತ್ತಾಪ'ದ ರೂಪದಲ್ಲಿದೆ. ಅಜ್ಞಾನದಿಂದ ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ, ಕ್ಷಮೆಗಾಗಿ ಬೇಡುವ ಈ ಹಾಡು ದಾಸ ಸಾಹಿತ್ಯದ ಅತ್ಯಂತ ದೈನ್ಯಪೂರ್ಣ ರಚನೆಗಳಲ್ಲಿ ಒಂದಾಗಿದೆ.

ಸಂಕ್ಷಿಪ್ತ ಸಾರಾಂಶ (Summary)
ಈ ದೇವರನಾಮದಲ್ಲಿ ಪುರಂದರದಾಸರು ಮನುಷ್ಯನು ಲೌಕಿಕ ಆಸೆಗಳಿಗೆ ಮರುಳಾಗಿ, ಭಗವಂತನ ಸ್ಮರಣೆ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಹೇಗೆ ಮರೆತುಬಿಡುತ್ತಾನೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ತಾನು ಮಾಡಿದ ಪಾಪಗಳಿಗೆ ಮಿತಿಯಿಲ್ಲ, ಸತ್ಕರ್ಮಗಳನ್ನು ಮಾಡುವ ಅವಕಾಶವಿದ್ದರೂ ಮಾಡಲಿಲ್ಲ ಎಂದು ಒಪ್ಪಿಕೊಳ್ಳುತ್ತಾ, ಕೊನೆಯಲ್ಲಿ "ನನ್ನ ಅವಗುಣಗಳನ್ನು ಎಣಿಸದೆ, ದೀನವತ್ಸಲನಾದ ನೀನೇ ನನ್ನನ್ನು ಕಾಯಬೇಕು" ಎಂದು ತಿಮ್ಮಪ್ಪನಲ್ಲಿ (ಶ್ರೀನಿವಾಸ) ಮೊರೆ ಹೋಗುತ್ತಾರೆ.

ಅರ್ಥ (Meaning Parawise)
ಪಲ್ಲವಿ:

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||
ಅರ್ಥ: ಎಲೈ ತಿಮ್ಮಪ್ಪನೇ, ನಾನು ಮಾಡಿದ ಅಸಂಖ್ಯಾತ ತಪ್ಪುಗಳನ್ನು ನೀನು ಕ್ಷಮಿಸಿ ಒಪ್ಪಿಕೊಳ್ಳಬೇಕು. ನನ್ನ ತಂದೆಯಾದ ನೀನೇ ನನ್ನನ್ನು ಈ ಸಂಸಾರದಿಂದ ರಕ್ಷಿಸಬೇಕು.

ಚರಣ 1-2: ಸಂಸಾರದ ಬಲೆ ಮತ್ತು ಅಲೆದಾಟ
ಸಂಸಾರ ಎಂಬ ಬಲೆಯಲ್ಲಿ ಸಿಕ್ಕು, ಹೆಂಡತಿ-ಮಕ್ಕಳ ಆಸೆಗೆ ಮರುಳಾಗಿ ಮತಿಹೀನನಾದೆ. ನನ್ನ ಪಾಪಗಳಿಗೆ ಕೊನೆಯೇ ಇಲ್ಲ, ಈಗ ನೀನಲ್ಲದೆ ನನಗೆ ಬೇರೆ ಗತಿಯಿಲ್ಲ. ಹಸಿವು-ತೃಷೆಗಳ ಬಾಧೆಯಿಂದ ದೇಶದೇಶ ಅಲೆದೆ, ಬದುಕಿಗಾಗಿ ಹುಟ್ಟುಗಾಲದಿಂದಲೂ ಅಸಂಖ್ಯಾತ ಸುಳ್ಳುಗಳನ್ನು ಹೇಳುತ್ತಾ ಕಾಲ ಕಳೆದೆ.

ಚರಣ 3-4: ಸಾಧನೆಯ ಶೂನ್ಯತೆ
ಸ್ನಾನ-ಸಂಧ್ಯಾವಂದನೆಗಳಂತಹ ದೈನಂದಿನ ಧರ್ಮಕಾರ್ಯಗಳನ್ನು ಅರಿಯಲಿಲ್ಲ. ಉಣ್ಣುವುದು-ಕುಡಿಯುವುದನ್ನು ಮಾತ್ರ ಎಂದೂ ಮರೆಯಲಿಲ್ಲ. ಕೆಟ್ಟವರ ಸಂಘವನ್ನು ಬಿಡಲಿಲ್ಲ ಮತ್ತು ಜ್ಞಾನಿಗಳನ್ನು ಹತ್ತಿರಕ್ಕೆ ಕರೆಯಲಿಲ್ಲ. ಜಪ-ತಪಗಳಲ್ಲಿ ನನಗೆ ಯಾವುದೇ ಶಿಸ್ತಿಲ್ಲ, ಚಪಲತನದಿಂದಲೇ ಕಾಲವನ್ನೆಲ್ಲ ವ್ಯರ್ಥ ಮಾಡಿದೆ.

ಚರಣ 5-7: ಅರ್ಚನೆಯ ವೈಫಲ್ಯ
ಗಂಗೆಯ ಪವಿತ್ರ ಜಲ ತಂದು ನಿನಗೆ ಸ್ನಾನ ಮಾಡಿಸಲಿಲ್ಲ, ಸುಗಂಧಿತ ಹೊಂಗೇದಿಗೆ ಪುಷ್ಪಗಳನ್ನು ನಿನಗೆ ಅರ್ಪಿಸಲಿಲ್ಲ. ಗಂಧ-ಅಕ್ಷತೆ ಅಥವಾ ಒಂದು ತುಳಸಿ ದಳದಿಂದಲೂ ನಿನ್ನನ್ನು ಪೂಜಿಸದ ಕಾರಣ, ನಾನು ಸದ್ಗತಿಯಿಂದ ದೂರಾಗಿ ಬಹಳ ನೊಂದಿದ್ದೇನೆ.

ಚರಣ 8-10: ಬಾಹ್ಯ ಮತ್ತು ಆಂತರಿಕ ಪೂಜೆಯ ಕೊರತೆ
ಪೀತಾಂಬರವಾಗಲಿ, ಸುಂದರ ಆಭರಣಗಳನ್ನಾಗಲಿ ನಿನಗೆ ತೊಡಿಸಿ ಪ್ರೀತಿಯಿಂದ ಪೂಜಿಸಲಿಲ್ಲ. ಒಂದು ದೂಪ-ದೀಪವನ್ನೂ ಹಚ್ಚದೆ ಈ ಜನ್ಮವನ್ನೆಲ್ಲ ವ್ಯರ್ಥ ಮಾಡಿದೆ. ಯಾವುದೇ ಸಿದ್ಧತೆಗಳಿಲ್ಲದೆ, ಮಾಡಿದ ಅಡುಗೆಯನ್ನು ನಿನಗೆ ಅರ್ಪಿಸದೆ ಪಾಪಕರ್ಮಗಳಿಗೆ ಗುರಿಯಾದೆ.

ಚರಣ 11-13: ಭಕ್ತಿರಹಿತ ಬದುಕು
ಪಂಚಭಕ್ಷ್ಯ ಪರಮಾನ್ನಗಳಿಂದ ನಿನ್ನನ್ನು ಅರ್ಚಿಸಲಿಲ್ಲ. ನಿನಗೆ ಮಂಗಳಾರತಿ ಮಾಡಲಿಲ್ಲ, ನಿನ್ನ ಮಹಿಮೆಯನ್ನು ಹಾಡಲಿಲ್ಲ, ಕಣ್ಣಾರೆ ನಿನ್ನ ರೂಪವನ್ನು ನೋಡಲಿಲ್ಲ. ನಿನ್ನ ಗುಡಿಗೆ ಪ್ರದಕ್ಷಿಣೆ ಹಾಕಲಿಲ್ಲ, ಹರಿದಿನದ (ಏಕಾದಶಿ) ಉಪವಾಸ ಮಾಡಲಿಲ್ಲ ಮತ್ತು ಹರಿದಾಸರ ಸಂಘವನ್ನೂ ಬೆಳೆಸಲಿಲ್ಲ.

ಚರಣ 14-15: ಅತಿಥಿ ಸತ್ಕಾರ ಮತ್ತು ಸಂಯಮದ ಕೊರತೆ
ಮನೆಗೆ ಬಂದ ಅತಿಥಿಗಳಿಗೆ "ನನ್ನ ಬಳಿ ಏನೂ ಇಲ್ಲ" ಎಂದು ಸುಳ್ಳು ಹೇಳಿ ಓಡಿಸಿದೆ. ಜ್ಞಾನಿಗಳಾದ ಯತಿಗಳನ್ನು ನಿಂದಿಸಿದೆ. ಯಾವುದೇ ಹೋಮ-ಹವನಗಳನ್ನು ನೇಮದಿಂದ ಮಾಡದೆ, ಕೇವಲ ಕಾಮ ಮತ್ತು ಭ್ರಮೆಯಲ್ಲಿ ಸಿಕ್ಕು ಅಲೆದಾಡಿದೆ.

ಚರಣ 16 (ಮುಕ್ತಾಯ): ಶರಣಾಗತಿ

ಎಷ್ಟು ಹೇಳಲಿ ಅವಗುಣಗಳೆಲ್ಲ... ಸರ್ವಸೃಷ್ಟಿಗೊಡೆಯ ಪುರಂದರವಿಟ್ಠಲ ||
ಅರ್ಥ: ನನ್ನಲ್ಲಿರುವ ಕೆಟ್ಟ ಗುಣಗಳನ್ನು ಎಷ್ಟು ಎಂದು ವರ್ಣಿಸಲಿ? ಅವುಗಳಿಗೆ ಲೆಕ್ಕವೇ ಇಲ್ಲ. ಹೇ ದೀನವತ್ಸಲನೇ, ಈ ಜಗತ್ತಿನ ಒಡೆಯನಾದ ಪುರಂದರ ವಿಠಲನೇ, ನಿನ್ನ ಕರುಣಾ ದೃಷ್ಟಿಯಿಂದ ನನ್ನನ್ನು ನೋಡಿ ಸಲಹು.
***

This profound composition by Purandara Dasa is a masterpiece of "Atma-Nivedana" (soul-offering) and "Pashchattapa" (repentance). In this song, the devotee stands before the Lord, laying bare every human flaw and seeking unconditional grace.

Brief Summary
In this Devaranama, Purandara Dasa acts as a mirror to the human condition. He describes how man becomes so entangled in worldly attachments (Samsara) and sensory pleasures that he neglects his spiritual duties. Admitting that his sins are countless and his merits are zero, he pleads with Lord Timmappa (Venkateshwara) to overlook his faults and offer protection. It is a song of total surrender (Sharanagati), teaching that the first step to grace is the honest admission of one's own shortcomings.

Stanza-wise Meaning
Refrain (Pallavi):

tappugaḷella nīnoppikoḷḷo nammappa kāyabēku timmappa nīne ||
Meaning: "O Timmappa, my Father! You must accept all my faults and forgive them. You alone must protect me from the cycle of birth and death."

Stanzas 1–2: Worldly Entanglement and Wanderings
"I got caught in the web of family life (Samsara), becoming mindless in my pursuit of desires for wife and children. There is no limit to my sins; where is my salvation now, O Lord? I wandered through countries, braving sun, rain, and storms, and spoke countless lies since birth just to satisfy my hunger and thirst."

Stanzas 3–4: Spiritual Neglect
"I never learned the basics of spiritual discipline, like daily bathing rituals or prayers (Sandhyavandana). While I never forgot to eat or drink, I never managed to leave the company of the wicked or call upon the wise. I wasted my time in fickleness, without any sincerity in chanting or penance (Japa-Tapa)."

Stanzas 5–7: Failure in Devotional Service
"I failed to bring the holy waters of the Ganga to bathe You, nor did I offer the fragrant Kethaki flowers. Because I did not worship the Lord of Indira with sandalwood, sacred rice, or even a single Tulsi leaf, I have drifted far from the path of liberation and suffer in pain."

Stanzas 8–10: Lack of Ritual Purity and Offering
"I did not adorn You with silken robes or new ornaments. I didn't even light a single lamp or offer incense (Dhupa). My entire life passed this way. I committed the sin of consuming food without first offering it to Gopala Krishna. O Protector of those in distress (Apadbhandava), do not let go of my hand."

Stanzas 11–13: Devotionless Living
"I did not worship You with delicious offerings or sacred songs. My eyes never sought Your beautiful form, and my tongue never called out to 'Muddu Ranga.' I did not perform circumambulations (Pradakshina) around Hari, nor did I fast on holy days (Ekadashi), nor did I seek the company of the Haridasas (servants of Hari)."

Stanzas 14–15: Disrespect to Guests and Sages
"When guests came to my door, I lied and said I had nothing to give. I went as far as insulting holy sages (Yatis). Driven by lust and illusions (Bhrama), I wandered aimlessly without ever performing a single sacrifice (Homa) with discipline."

Stanza 16 (Conclusion): Final Surrender

eṣṭu hēḷali avaguṇagaḷella... sarvasṛṣṭigoḍeya purandaraviṭṭhala ||
Meaning: "How many of my bad qualities can I list? They are far too many to count. O Protector of the humble (Deenavatsala), O Master of all creation, Purandara Vitthala! Look upon me with Your eyes of grace and save me."
***


ರಾಗ ನಾದನಾಮಕ್ರಿಯೆ ಅಟತಾಳ

pallavi

tappugaLella nInobbikoLLo nammappa kAyabEku timmappa nIne

caraNam 1

sati sutarige samsAra balage ati mati hInanAgi sikki AsegaLige
mitigANenayya enna pApagaLige munde gati yAvudayya shrIpati enage

caraNam 2

bisilu maLe birugALiyoLu balu dese geTTu tirugi dEsha dEshagaLu
hasivu truSegaLu bahu bAdhisalu bahu husiyADidenayya huTTu modalu

caraNam 3

snAna sandhyAnavaLondanariye anna pAnakagaLanu nAnomme mareye
hInara sanga endendu doreye sujnAnagaLanittu bA endu kareye

caraNam 4

japatapadali rIti bhASeyilla ennaparAdhagaLiginnu eNikeyilla
capalatanadi kAla kaLedenalla svAmi kapaTa nATaka nInE balleyalla

caraNam 5

gange akrOdakagaLa tandu snAnangaLa mADisalilla endu
hongEdige puSpavanondu shrIranga garbisalilla kAyo bandu

caraNam 6

gandhAkSate puSpangaLinda bare ondu daLa shrI tuLasiyinda
indirEshana arcisadarinda bahu nondu dUrAde sadgatiyinda

caraNam 7

pItAmbarAdi vastragaLinda divya nUtanavAda AbharaNadinda
prIti paDisalillAdradinda hE sItApatE krSNa hari mukunda

caraNam 8

dhUpAratiya nA mADalilla ondu dIpavanAdaru haccalilla
I pari kaLeyitI janmavella dEva ApadbAndhava kAyo lakSmInalla

caraNam 9

sOpaskaravanu ondu mADade ella gOpAlakrSNage arpisade
pApa karmake nA kuriyAde svAmi shrIpati kAyo enna kai biDade

caraNam 10

pAysa panca pakSagaLinda AyatavAda shAkagaLinda
tOya shAlyanna gO kharutadinda krSNa rAyanarcisalilla bhaktiyinda

caraNam 11

mangaLAratiyanu mADalilla jaya mangaLavendu nA pADalilla
kangaLindali ninna nODalilla muddu rangane bA endu bEDalilla
1
caraNam 2

hariya pradakSiNe mADalilla narahariya pAdake nA bILalilla
haridinadupavAsa mADalilla shrI haridAsaroDane nA kUDalilla
1
caraNam 3

atithigaLendu bndare manege Enu gatiyilla kUDadu yende enage
yatigaLa kUDa nindiside konege shrIpati drSTiyiDu I pApi kaDege
1
caraNam 4

hOmArcane jeLapAsaneyella endU nEmadindali nA mADalilla
kAmAturadi kaNDa kaNDallellA rAma bhrAmakanAgi tirugidenalla
1
caraNam 5

eSTu hELali avaguNagaLella avu aSTu iSTu endu eNikeyilla
drSTiyindali nODo dInavatsala sarva shrSTikoDeya purandara viTTala 
***

ಪುರಂದರದಾಸರು
ತಪ್ಪುಗಳನೆಲ್ಲ ನೀನೊಪ್ಪಿ ಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆ ಪ

ಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1

ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2

ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3

ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4

ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5

ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6

ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7

ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8

ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9

ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10

ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11

ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12

ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
*****


ಉಗಾಭೋಗ

ಅಪರಾಧ ಹತ್ತಕೆ, ಅಭಿಷೇಕ ಉದಕ
ಅಪರಾಧ ನೂರಕೆ, ಕ್ಷೀರ ಹರಿಗೆ
ಅಪರಾಧ ಸಹಸ್ರಕೆ, ಹಾಲು ಮೊಸರು ಕಾಣೋ
ಅಪರಾಧ ಲಕ್ಷಕೆ, ಜೇನು ಘೃತ
ಅಪರಾಧ ಹತ್ತುಲಕ್ಷಕೆ, ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ, ಹತ್ತು ತೆಂಗಿನ ಹಾಲು
ಅಪರಾಧ ಕೋಟಿಗೆ, ಅಚ್ಚ ಜಲ
ಅಪರಾಧ ಅನಂತಕ್ಷಮಿಗೆ, ಗಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ

***

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನ-
ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||ಪ||

***


No comments:

Post a Comment