Saturday 4 December 2021

ಅಂತರಂಗದ ರೋಗ ಯಾವುದು ಅದು ಚಿಂತೆಯಲ್ಲದೆ ankita hayavadana ANTARANGADA ROGA YAAVUDU ADU CHINTEYALLADE



ಲೋಕನೀತಿ

ಅಂತರಂಗದ ರೋಗ ಯಾವುದು 

ಅದು ಚಿಂತೆಯಲ್ಲದೆ ಮತ್ತ್ಯಾವುದು ||ಪ||


ಸಂತತ ಶ್ರೀ ಹರಿನಾಮದಿಂದ್ಹೋಹುದು

ಅಂತ್ಯಕೊದಗಿತ ಅಜಮಿಳನಿಗೆ ಇನ್ಯಾವುದು ||ಅ.ಪ||


ಶ್ರವಣ ಮನನ ಸಾಧನ ನವವಿಧ ಭಕ್ತಿ 

ಭವ ಬೇರ ಕಡಿವುದು ಎಂದರಿಯಬೇಕು

ರವಿಕುಲಾಂಬುಧಿಸೋಮ ರಾಮನ್ನ ಚಿಂತಿಸಿ 

ಭವವಾರಿಧಿಯ ದಾಟುವರೆಲ್ಲರು ಕೇಳಿ ||೧||


ಜರಾಮರಣಾದಿ ದುಃಖಗಳ ಪರಿಹರಿಸಿ 

ಪರಿಪರಿಯಾನಂದ ಕೊಡುವುದಿದು

ಮರೆಯದೆ ಮನದಲಿ ಒಮ್ಮೆ ನೆನೆದು ಪಾಡೆ

ಸರುವಾಭೀಷ್ಟವ ಕೊಡುವುದಿದೊಂದೆವೆ ||೨||


ಭಯಗಳ ಬಿಡಿಸಿ ಅಭಯಗಳ ಕೊಡಿಸುವ

ಭವದೂರ ಗೋವಿಂದನೆಂದರಿತು 

ಹಯವದನನೆ ಎನ್ನ ಉದ್ಧರಿಸೊ ಎಂದು

ನಯದಿಂದ ಬೇಡುವರ ಭಾಗ್ಯವೆ ಭಾಗ್ಯ ||೩||

***


Antarangada roga yavudu 

adu chinteyallade mattyavudu ||pa||


Santata sri harinamadindhohudu

antyakodagit ajamilanige inyavudu ||a.pa||


Shravaṇa manana sadhana navavidhabhakti 

bhava beraka divudu endariyabeku

ravikulambudhisoma ramanna chintisi 

bhavavaridhiya datuvarellaru keli ||1||


Jaramaranadi duhkhagala pariharisi 

paripariyananda koduvudidu

mareyade manadali omme nenedu pade

saruvabhistava koduvudidondeve ||2||


Bhayagala bidisi abhayagala kodisuva

bhavadura govindanendaritu 

hayavadanane enna uddhariso endu

nayadinda beḍuvara bhagyave bhagya ||3||

***



pallavi


antarangada rOga yAvudu adu cinteyallade mattyAvudu


anupallavi


santata shrI harinAmadindhOhudu antyakodagidaja(jA)miLaniginnAvudu


caraNam 1


shravaNa manana sAdhana navavidha bhakti bhavabEra kaDivudendariyabEku

ravikulAmbudhi sOma rAmanna cintisi bhavavAridhiya dATuvarellaru kELi


caraNam 2


jarAmaraNAdi duhkhagaLa pariharisi paripariyAnanda koDuvudidu

mareyade manadali omme nenedu pADe saruvAbhISTava koDuvudidonde


caraNam 3


bhayagaLa biDisi abhayagaLa koDisuva bhavadUra gOvindanendaritu

hayavadanane enna uddharisO endu nayadinda bEDuvara bhAgyave bhAgya

***



ಅಂತರಂಗದ ರೋಗ ಯಾವುದು ಅದುಚಿಂತೆಯಲ್ಲದೆ ಮತ್ತ್ಯಾವುದು ಪ.


ಸಂತತ ಶ್ರೀಹರಿನಾಮದಿಂದ್ಹೋಹುದುಅಂತ್ಯಕೊದಗಿತಜಮಿಳನಿಗಿನ್ನಾವುದು ಅ.ಪ.


ಶ್ರವಣ ಮನನ ಸಾಧನ ನವವಿಧಭಕ್ತಿಭವಬೇರ ಕಡಿವುದೆಂದರಿಯಬೇಕುರವಿಕುಲಾಂಬುಧಿಸೋಮ ರಾಮನ್ನ ಚಿಂತಿಸಿಭವವಾರಿಧಿಯ ದಾಟುವರೆಲ್ಲರು ಕೇಳಿ 1


ಜರಾಮರಣಾದಿ ದುಃಖಗಳ ಪರಿಹರಿಸಿಪರಿಪರಿಯಾನಂದ ಕೊಡುವುದಿದುಮರೆಯದೆ ಮನದಲಿ ಒಮ್ಮೆ ನೆನೆದು ಪಾಡೆಸರುವಾಭೀಷ್ಟವ ಕೊಡುವುದಿದೊಂದೆವೆ 2


ಭಯಗಳ ಬಿಡಿಸಿ ಅಭಯಗಳ ಕೊಡಿಸುವಭವದೂರ ಗೋವಿಂದನೆಂದರಿತುಹಯವದನನೆ ಎನ್ನ ಉದ್ಧರಿಸೊ ಎಂದುನಯದಿಂದ ಬೇಡುವರ ಭಾಗ್ಯವೆ ಭಾಗ್ಯ 3

***


No comments:

Post a Comment