ಕರುಣಿಸಲೊಲ್ಯಾ ಕರುಣಾನಿಧೇ ಪ
ಕರುಣಿಸಲೊಲ್ಯಾ ನೀ ಕರುಣಸಾಗರ ನಿನ್ನ
ಚರಣಭಜಿಸಿ ಭವ ಅರಣ ದಾಟುವಂತೆ ಅ.ಪ
ವಿಶ್ವಾಂತರ್ಗತನೆ ವಿಶ್ವಾಹ್ವಯಾ
ವಿಶ್ವವ್ಯಾಪಕನೆ ವಿಶ್ವಾಸುವಿಶ್ವ ನೀ
ವಿಶ್ವ ಪ್ರೇರಕ ನಿನ್ನ ವಿಶ್ವಪಾದದೊಳು ನಾ
ವಿಶ್ವಾಸಮಾಳ್ಪÀಂತೆ 1
ದಾನವಾಂತಕನೆ ದಯಾಕರಾ
ಜ್ಞಾನದಾಯಕನೆ ಜ್ಞಾನದಾಯಕ ಎನ್ನ
ಜ್ಞಾನನಿಚಯ ನೀನೆ ಹಾನಿಮಾಡಿ ನಿನ್ನ
ಜ್ಞಾನವನೈದೊಂತೆ 2
ಮಂದರೋದ್ಧರನೆ ಮಹಾರಾಯಾ
ನಂದದಾಯಕನೆ ಇಂದಿರಾಪತಿ ನಿಜ
ನಂದಕೊಡುವ ನಿನ್ನ ದ್ವಂದ್ವ ಚರಣದೊಳು
ಸಂದೇಹವಿಲ್ಲದಂತೆ 3
ಕಾಮಿತಾರ್ಥವನೆ ಕಮಲಾಕ್ಷಾ
ಕಾಮನ್ನಪಿತನೆ ಕಾಮಿತಾರ್ಥಗಳನ್ನು
ಕಾಮಿಸದಲೆ ನಿನ್ನ ನಾಮವ ಭಜಿಸುವ
ನೇಮಮತಿಯನಿತ್ತು 4
ಸೃಷ್ಟಿಕಾರಣನೆ ಶ್ರೀಕೃಷ್ಣಯ್ಯಾ
ವೃಷ್ಣಿನಾಯಕನೆ ದುಷ್ಟಮತಿಯ ಬಿಡಿಸಿ
ಶಿಷ್ಟಜ್ಞಾನವನಿತ್ತು ದಿಟ್ಟಗುರುಜಗನ್ನಾಥ
ವಿಠಲ ನೀ ಎನ್ನ 5
***