ರಾಗ ಪುನ್ನಾಗವರಾಳಿ. ಆದಿ ತಾಳ
ಗುಡುಗುಡಿಯನು ಸೇದಿ ನೋಡೊ ಸೇದಿ ನೋಡೊ ||ಪ||
ನಿನ್ನ ಒಡಲ ಪಾಪಂಗಳನೆಲ್ಲ ಈಡಾಡೋ ||ಅ||
ಮನವೆಂಬೊ ಸಂಚಿಯ ಬಿಚ್ಚಿ, ನಿನ್ನ
ದಿನದ ಪಾಪಗಳೆಂಬೊ ಭಂಗಿಯ ಕೊಚ್ಚಿ
ತನುವೆಂಬೊ ಚಿಲುಮೆಯೊಳಿಕ್ಕಿ, ಅಚ್ಯು-
ತನ ಧ್ಯಾನವೆಂತೆಂಬೊ ಬೆಂಕಿಯ ಹಚ್ಚಿ ||
ಬುರುಡೆಯೆಂಬೋದು ಈ ಶರೀರ, ನಿನ್ನ
ಗುರುಭಕ್ತಿಯೆಂಬೋದೆ ಕೊಳವಿಯಾಕಾರ
ಸಿರಿನಾರಾಯಣನೆಂಬೊ ನೀರ, ಅದ-
ನರಿತು ತುಂಬಿಕೊಳ್ಳೊ ಎಲ ಮೋಜುಗಾರ ||
ಸತ್ಯದಿಂದಮಲು ಏರುವುದು, ದಾ-
ರಿದ್ರ್ಯ ದೋಷವು ಸುಟ್ಟು ಹೊಗೆಯು ಹಾರುವುದು
ಬುದ್ಧಿಗೆ ಜ್ಞಾನ ತೋರುವುದು, ಗುರು
ಮಧ್ವೇಶ ಪುರಂದರವಿಠಲನ ತೋರುವುದು ||
***
ಗುಡುಗುಡಿಯನು ಸೇದಿ ನೋಡೊ ಸೇದಿ ನೋಡೊ ||ಪ||
ನಿನ್ನ ಒಡಲ ಪಾಪಂಗಳನೆಲ್ಲ ಈಡಾಡೋ ||ಅ||
ಮನವೆಂಬೊ ಸಂಚಿಯ ಬಿಚ್ಚಿ, ನಿನ್ನ
ದಿನದ ಪಾಪಗಳೆಂಬೊ ಭಂಗಿಯ ಕೊಚ್ಚಿ
ತನುವೆಂಬೊ ಚಿಲುಮೆಯೊಳಿಕ್ಕಿ, ಅಚ್ಯು-
ತನ ಧ್ಯಾನವೆಂತೆಂಬೊ ಬೆಂಕಿಯ ಹಚ್ಚಿ ||
ಬುರುಡೆಯೆಂಬೋದು ಈ ಶರೀರ, ನಿನ್ನ
ಗುರುಭಕ್ತಿಯೆಂಬೋದೆ ಕೊಳವಿಯಾಕಾರ
ಸಿರಿನಾರಾಯಣನೆಂಬೊ ನೀರ, ಅದ-
ನರಿತು ತುಂಬಿಕೊಳ್ಳೊ ಎಲ ಮೋಜುಗಾರ ||
ಸತ್ಯದಿಂದಮಲು ಏರುವುದು, ದಾ-
ರಿದ್ರ್ಯ ದೋಷವು ಸುಟ್ಟು ಹೊಗೆಯು ಹಾರುವುದು
ಬುದ್ಧಿಗೆ ಜ್ಞಾನ ತೋರುವುದು, ಗುರು
ಮಧ್ವೇಶ ಪುರಂದರವಿಠಲನ ತೋರುವುದು ||
***
pallavi
guDu guDiyanu sEdi nODo sEdi nODo
anupallavi
ninna oDala pApangaLanella IDADO
caraNam 1
manavembo sanciya bicci ninna dinada pApagaLembo bhangiya kocci
tanuvembo cilumeyoLikki acyu tana dhyAnavendembo bengiya hacci
caraNam 2
buruDeyembOdu I sharIra ninna guru bhaktiyembode koLaviyAkara
siri nArAyaNanembo nIra adanaridu tumbikoLLo ela mOjugAra
caraNam 3
satyadindamalu Eruvudu dAridrya dOSavu suTTu hogeyu hAruvudu
buddhige jnAna tOruvudu guru madhvEsha purndara viTTalana tOruvudu
***