Showing posts with label ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ gurumahipati. Show all posts
Showing posts with label ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ gurumahipati. Show all posts

Wednesday, 1 September 2021

ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ankita gurumahipati

ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ಪ 


ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1 

ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2 

ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3

***