ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ನೀ ಅನಸೂಯಾ ಪುತ್ರನೇ ಜೀಯಾ ದತ್ತಾತ್ರೇಯ ದೇವನೇ ಪ
ಪತ್ರೇಂದ್ರ ಗಮನಾ ಪರಮಾನಂದಾ ಶತ ಪತ್ರದಳ ನಯನಾ ಕೇಶವಾ ಮಿತ್ರ ಶತಕೋಟಿ ಪ್ರಕಾಶ ಸುರೇಶನೇ ಅತ್ರಿ ಗೋತ್ರ ಸಮುದ್ಭವಾ 1
ಸರ್ವಾಧಾರವ್ಯಯ ತ್ರಯ ಮೂರು ಸರ್ವ ಲೋಕ ವ್ಯಾಪ್ತನು ಚಾರು ತತ್ವರಿತ ಸರ್ವಾತೀತ ಮುಕುಂದನೇ 2
ಯೋಗಿ ಜನರ ಮಾನಸ ಹಂಸಾ ಸಂತ ಗುಣ ಸಂಪನ್ನನು ಅನಂತ ರೂಪ ಮಹಿಪತಿ ನಂದನ ಪ್ರಭು ಅನಂತ ಮಹಿಮ ಶ್ರೀ ಕೃಷ್ಣನೇ3
****