Showing posts with label ಶರಣು ಶರಣು ಶರಣ್ಯ ವಂದಿತ ಶಂಖ ಚಕ್ರ purandara vittala SHARANU SHARANU SHARANYA VANDITA SHANKHA CHAKRA. Show all posts
Showing posts with label ಶರಣು ಶರಣು ಶರಣ್ಯ ವಂದಿತ ಶಂಖ ಚಕ್ರ purandara vittala SHARANU SHARANU SHARANYA VANDITA SHANKHA CHAKRA. Show all posts

Monday, 6 December 2021

ಶರಣು ಶರಣು ಶರಣ್ಯ ವಂದಿತ ಶಂಖ ಚಕ್ರ purandara vittala SHARANU SHARANU SHARANYA VANDITA SHANKHA CHAKRA



ಪುರಂದರದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರ ಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.

ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1

ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2

ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3

ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4

ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
*******