Showing posts with label ಸ್ಮರಿಸುವೆನನು pranesha vittala nadee devata stutih. Show all posts
Showing posts with label ಸ್ಮರಿಸುವೆನನು pranesha vittala nadee devata stutih. Show all posts

Friday 27 December 2019

ಸ್ಮರಿಸುವೆನನು ankita pranesha vittala nadee devata stutih

by ಪ್ರಾಣೇಶದಾಸರು
ನದೀದೇವತೆಗಳ ಸ್ತುತಿ 
ಸ್ಮರಿಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ ಪ

ಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ ||ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ 1

ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ ||ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ 2

ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿಹೇಮ|ಮೂರುವೇಣಿಗಾಯತ್ರಿ ವೇಗವತೀ ||ಸೂರಿಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ3

ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ ||ಹೇಮಮುಖರ ತಾಪಿನಿ ಕಾಳಿ ಸೌಪರಣಿ ಪಿನಾಕೀ |ಶ್ರೀ ಮತ್ಕಪಿಲ ಜಮದಗ್ನಿಪ್ರಣವಸಿದ್ಧ4

ಮರುದ್ವತಿ ಮದಿರ ಮೇನುಕಾ ಸೂನಾಸಿ ಚಕ್ರವತಿ |ಗರುಡ ಶಂಖವತೀ ಕುಹು ಮಹೇಶ್ವರೀ ||ಸರಯು ಜಯ ಮಂಗಳ ಯೋಗಕೃತು ಮಾಲಾ ಗದಾ |ಧರಿ ಮಾಲಿನೀ ಗಾರ್ಗಿಣೀ ದೇವವತಿ5

ಸಾವಿತ್ರಿ ಧನ್ಯಮಾಲಾ ಧರ್ಮ ಚಕ್ರತೀರ್ಥಹರಿ|ದ್ರಾವತಿ ಇಂದ್ರಾಣಿ ಪಾತಾಳಗಂಗಾ ||ಶೈವಕುಂಡ ಕುಂಡಿನಿ ನೀರ ಕುಮಾರ ಧಾರೀ ಶು |ಶಾವರ್ತಿ ಮೌಳೀ ಲೋಕಪಾವನೀ 6

ಸ್ವಾಮಿ ಪುಷ್ಕರ್ಣಿ ಚಂದ್ರ ಪುಷ್ಕರ್ಣಿ ಮಾನಸ ಪುಷ್ಕರ್ಣಿ |ಶ್ರೀ ಮಧ್ವ ಸರೋವರ ಪದ್ಮ ಸರಾ ||ಸೋಮಭಾಗಾ ವ್ಯಾಸಸಿಂಧುಶ್ರೀ ಪಂಪಾ ಸರೋವರ |ವಾಮನ ಶ್ರೀ ಮಯೂರ ಸರೋವರ 7

ರೋಮ ಹರ್ಷಣ ತೀರ್ಥ ಸೀತಾ ಸರೋವರ ಪುಣ್ಯ |ಧಾಮಾ ಶ್ರೀ ಕಪಿಲತೀರ್ಥ ಧವಳಗಂಗಾ ||ಭೀಮಸೇನ ತಟಾಕಬ್ರಹ್ಮಜ್ಞಾನಕನ್ಯಹೃದಯ |ಶ್ರೀ ಮದ್ವಿಶಿಷ್ಟ ತೀರ್ಥ ತಾರಾ ತೀರ್ಥ 8

ಈ ತೀರ್ಥಗಳ ದಿವ್ಯನಾಮನಿತ್ಯಪಠಿಸಲು |ಯಾತಕ್ಕಾದರೂ ವಿಘ್ನ ಬಾರದು ||ಮಾತರಿಶ್ವಪ್ರೀಯ ಪ್ರಾಣೇಶ ವಿಠಲನು ಬಹು |ಪ್ರೀತನಾಗಿ ಬಿಡದೆ ಪೊರೆವನು 9
********