Showing posts with label ಪ್ರಾಣಅಪಾನ vijaya vittala ankita suladi ಕೇನ ಷಟ್ಪ್ರಶ್ನೋಪನಿಷತ್ ಸುಳಾದಿ PRAANA APAANA KENA SHAT PRASHNOPANISHAT SULADI. Show all posts
Showing posts with label ಪ್ರಾಣಅಪಾನ vijaya vittala ankita suladi ಕೇನ ಷಟ್ಪ್ರಶ್ನೋಪನಿಷತ್ ಸುಳಾದಿ PRAANA APAANA KENA SHAT PRASHNOPANISHAT SULADI. Show all posts

Monday, 9 December 2019

ಪ್ರಾಣಅಪಾನ vijaya vittala ankita suladi ಕೇನ ಷಟ್ಪ್ರಶ್ನೋಪನಿಷತ್ ಮಹಿಮಾ ಸುಳಾದಿ PRAANA APAANA KENA SHAT PRASHNOPANISHAT MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ಪ್ರಾಣದೇವರ ಕೇನ ಷಟ್ಪ್ರಶ್ನೋಪನಿಷತ್ ಮಹಿಮಾ ಸ್ತೋತ್ರ ಸುಳಾದಿ 

 ರಾಗ ಆನಂದಭೈರವಿ 

 ಧ್ರುವತಾಳ 

ಪ್ರಾಣ ಅಪಾನ ವ್ಯಾನ ಸಮಾನ ಉದಾನ
ಜ್ಞಾನಮಯ ಸತ್ವಶರೀರ ಸಮೀರ
ಆನಂದಸಾಂದ್ರ ಹರಿನಂದನ ಪವಮಾನ
ಮಾನದಭಿಮಾನಿಯೆ ವಾಣಿಪ್ರಿಯ
ನೀನೆ ಸರ್ವರಲ್ಲಿ ಗೀರ್ವಾಣರಿಗೆ ಮೊದಲು
ನಾನಾ ಪ್ರಕಾರ ಜೀವಿಗಳಾಧಾರ
ಸ್ನಾನ ಜಪ ತಪ ಹೋಮ ಮೌನ ತೀರ್ಥಯಾತ್ರೆ
ನೀ ನಡೆಸಲದರಿಂದ ಸಿದ್ಧಿಪವು
ನೀನೆಲ್ಲಿ ಅಲ್ಲಿ ಶ್ರೀ ನಾರಾಯಣನು ಇಪ್ಪ
ಏನೆಂಬೆ ನಿನ್ನಯ ಕರ್ತೃತನಕೆ
ಕೋಣಿ ವಿಕೋಣಿಯಲ್ಲಿ ಸರ್ವ ವ್ಯಾಪಾರ ಪಂಚ -
ಪ್ರಾಣಜನಕ ವಾಯು ನಿನ್ನದಯ್ಯಾ
ದಾನವಾಮರರ ಮಧ್ಯ ಬಂದು ಆ ಘೋರ ವಿಷ -
ಪಾನವನ್ನು ಮಾಡಿದ ಪ್ರಭಂಜನ
ದೀನವತ್ಸಲ ನಮ್ಮ ವಿಜಯವಿಠ್ಠಲ ನಂಘ್ರಿ -
ರೇಣು ಶಿರದಲ್ಲಿ ಇಟ್ಟ ದ್ಯುರಮಣ ॥ 1 ॥

 ಮಟ್ಟತಾಳ 

ಸುರರು ತಮ್ಮೊಳು ತಾವೇ ನೆರೆದು ಯೋಚಿಸಿದರು
ಮರುತನು ನಮಗೆಲ್ಲಿ ಹಿರಿಯನು ಅಹುದೆಂಬ
ಗರುವಿಕೆತನವೇನು ಸರಿ ಸರಿ ಬಂದಾಗು -
ತ್ತರವ ನಾಡುತಿರೆ , ಹರಿ ಅಂದು ಒಂದು
ಶರೀರವನ್ನು ಮಾಡಿ ಪರಿಪರಿಯ ತ -
ತ್ವರ ಒಳಗೆ ಪೋಗಿಸಿದ ಮರುತನ ಸಹವಾಗಿ
ಪುರುಷನಾಮಕ ದೇವ ವಿಜಯವಿಠ್ಠಲರೇಯ 
ಸುರರಿಗೆ ಪ್ರಾಣನಿಗೆ ಪರಿಕ್ಷಿಸಿ ತೋರಿದ ॥ 2 ॥

 ತ್ರಿವಿಡಿತಾಳ 

ಚರಣದಿಂದಲಿ ಇಂದ್ರಸೂನು ಪೋಗಲು ಹೆಳವ
ಕರಗಳಿಂದಲಿ ದಕ್ಷ ಪೋಗಲು ಕರಹೀನ
ಮರಳೆ ನಯನದಿಂದ ಭಾನು ಪೋಗಲು ಕುರುಡ
ತರಣಿ ಮಕ್ಕಳು ಪೋಗೆ ಪರಿಮಳವಾಗದು
ವರುಣ ಪೋಗಲು ರುಚಿಯೆ ತೋರದು ಕಾಣೋ
ಮರುತಸಖನು ಪೋಗೆ ಮೂಕನಾಹ
ತೆರಳಿ ದಿಗ್ದೇವತೆಗಳು ಪೋಗೆ ಕಿವುಡನು
ತರಣಿ ಸ್ವಾಯಂಭು ಪೋಗಲು ಅಲ್ಲಿಯೋನಿಲ್ಲ
ಮರುತನು ಪೋಗಲು ಮೈಸ್ಮರಣೆಯು ಇಲ್ಲ
ಗರುಡ ಶೇಷ ರುದ್ರ ಪೋಗಲು ಹಾನಿಲ್ಲ
ಇರದೆ ಗಣೇಶಾದಿ ಪೋಗೆ ಅನಿಸಲಿಲ್ಲ ಪೆಣನೆಂದು
ವರಮುಖ್ಯಪ್ರಾಣ ಸ್ಥಾನದಿಂದಲಿ ವೇಗ
ತೆರಳಿ ಪೋಗಲು ದೇಹ ಪೆಣನೆಂದೆನಿಸಿತು
ಪರಿಕ್ಷಿಸಿ ತಿಳಿದು ನಾಚಿಕೆ ಉಳ್ಳವರಾಗಿ
ಮರಳೆ ಪ್ರವೇಶಿಸೆ ಆ ದೇಹ ಏಳದಿರೆ ಅಂದು
ಹರಿಗೆ ಕೇವಲ ಮುಖ್ಯದಾಸ ಮುಖ್ಯಪ್ರಾಣ
ತಿರುಗಿ ಬಂದು ಪೋಗಲು ಚೇತನಾಗೆ
ಸುರರು ತಮ್ಮೊಳು ತಾವು ನೋಡಿ ಕೊಳ್ಳುತಲೆ
ಮರುತದೇವನೆ ನಮಗೆ ಹಿರಿಯನೆಂದು
ಕರವ ಮುಗಿದು ನಿಂದು ಜಯವೆಂದು ಕೊಂಡಾಡಿ
ಗುರುವೆ ನೀನೆಂದು ಪವನನ ಕೊಂಡಾಡೆ
ಮಿರಗುವಾಂಬರಧರ ವಿಜಯವಿಠ್ಠಲನ 
ಶರಣರೊಳಗೆ ಮುಖ್ಯ ಶರಣ ಈತನು ಕಾಣೊ ॥ 3 ॥

 ಅಟ್ಟತಾಳ 

ತಂದೆ ಈತನು ಕಾಣೋ , ತಾಯಿ ಈತನು ಕಾಣೋ
ಬಂಧು ಬಳಗ ಸರ್ವಾರ್ಥವು ಈತನು
ಹಿಂದೆ ಮುಂದೆ ನಮಗಾಧಾರ ಈತನು
ಎಂದೆಂದಿಗೆ ಸಂಬಂಧಿಗ ನೀತನು
ಚಂದದ ರಸಾಯನ ಭೋಕ್ತನು ಈತನು
ಇಂದ್ರಿಯಂಗಳಿಗೆ ಪ್ರತಿದಿನ ನಿಯಾಮಕ
ನಂದಮಾರುತಿ ನಮ್ಮ ವಿಜಯವಿಠ್ಠಲನಂಘ್ರಿ 
ನಿಂದಿರಾರ್ಚಿಪ ಗರಳಭಂಜನ ದೇವಾ ॥ 4 ॥

 ಆದಿತಾಳ 

ತರಣಿ ಅಯನುತ್ತರ ಗೌರಪಕ್ಷ ಹಗಲು
ನರ ಭೂತವಾಯು ವ್ಯೋಮಾದಿಯಲ್ಲಿ ನೀನೆ
ಇರಳು ವಲ್ಲಭೆ ದಕ್ಷಿಣಾಯನ ಕೃಷ್ಣ ಪಕ್ಷ
ಇರಲು ಸ್ತ್ರೀ ತೇಜಾದಿಯಲ್ಲಿ ನಿನ್ನ ರಮಣಿ
ಪರಿಪೂರ್ಣವಾಗಿ ನೀವಿಬ್ಬರು ಸರ್ವದ
ಹರಿ ಅಜ್ಞೆಯಿಂದ ವ್ಯಾಪಾರ ಮಾಳ್ಪುದು
ಕರಣ ಶುಧ್ಧಿಯಲ್ಲಿ ಈ ಪರಿ ತಿಳಿದವರಿಗೆ
ದುರಿತಗಳೋಡಿಸಿ ವರ ಪದವಿಯನೀವೆ
ಸರಿಗಾಣೆ ನಿನ್ನ ಅದ್ಭುತ ಲೀಲೆಗೆ ನಾನು
ಎರಗಿ ನಮೊ ನಮೊ ಎಂಬೆ ಮರುತ ಪ್ರಧಾನನೆ
ಸಿರಿಯರಸ ವಿಜಯವಿಠ್ಠಲನ್ನ ನೆಚ್ಚಿದ
ಪರಮಭಕ್ತನು ನೀ ಎನಗೆ ಭರದ ಭಕ್ತಿಯ ಕೊಡು ॥ 5 ॥

 ಜತೆ 

ಮೂರವತಾರದ ಗುರುವೆ ಸುರತರುವೆ
ವಾರವಾರಕ್ಕೆ ವಿಜಯವಿಠ್ಠಲನ್ನ ಪ್ರತಿಬಿಂಬ ॥
************