Showing posts with label ಸಾರಿಭಜಿಸಿರೋ ವಾದಿರಾಜ ಗುರುಗಳಾ bhupati vittala vadiraja stutih. Show all posts
Showing posts with label ಸಾರಿಭಜಿಸಿರೋ ವಾದಿರಾಜ ಗುರುಗಳಾ bhupati vittala vadiraja stutih. Show all posts

Thursday, 26 December 2019

ಸಾರಿಭಜಿಸಿರೋ ವಾದಿರಾಜ ಗುರುಗಳಾ ankita bhupati vittala vadiraja stutih

ಸಾರಿ ಭಜಿಸಿರೋ ವಾದಿರಾಜ ಗುರುಗಳಾ
ಘೋರ ಸಂಕಟದಿಂದಾ ಪಾರು ಮಾಳ್ಪರಾ..........ಪ

ರುಜುಗುಣಸ್ಥರಾ ಅಜನ ಪದಕೆ ಅರ್ಹರಾ
ಸುಜನವಂದ್ಯರಾ ವಾಜಿವದನ ದಾಸರಾ...ಅ.ಪ

ವಕ್ರತರ್ಕದಾ ವಾದಿ ಸೊಕ್ಕು ಮುರಿದರಾ
ಯುಕ್ತಮಲ್ಲಿಕಾ ರಚಿಸಿ ಮುಕ್ತಿ ತೋರ್ಪರಾ....1

ಕುದುರೆ ಮೋರೆಯಾ ದೇವ ಮುದದಿ ಮೆಲುವನು
ಕಡಲೆ ಹೂರಣಾ ನೀವು ಕೊಡಲು ಅನುದಿನಾ......2

ಭೂತರಾಜನು ಸೋತು ದಾಸನಾದನು
ಅತಿ ಮಹತ್ವದಾ ಸೇವೆ ಸತತ ಮಾಳ್ವನು.3

ಭಕ್ತಿಯಿಂದಲಿ ಇವರ ಸ್ತುತಿಯ ಮಾಡಲು
ಭೂಪತಿವಿಠ್ಠಲಾ ಒಲಿದು ವರವಾ
ಕೊಡುವನು.......4
*********