Showing posts with label ಗುರುರಾಯ ಗುರುರಾಯ ದುರಿತ ಕಳೆಯೊ ದಯಾಸಾಂದ್ರ ramapati vittala. Show all posts
Showing posts with label ಗುರುರಾಯ ಗುರುರಾಯ ದುರಿತ ಕಳೆಯೊ ದಯಾಸಾಂದ್ರ ramapati vittala. Show all posts

Friday, 27 December 2019

ಗುರುರಾಯ ಗುರುರಾಯ ದುರಿತ ಕಳೆಯೊ ದಯಾಸಾಂದ್ರ ramapati vittala

ಗುರುರಾಯ ಗುರುರಾಯ                || ಪ ||
ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ        || ಅ ||

ನಮಿಸುವೆ ನಿನ್ನಡಿಗಮಿತ ವಿಧದಿ
ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ            || ೧ ||

ಆರ್ತಜನರ ಇಷ್ಟಾರ್ಥಗಳನ್ನೆಲ್ಲ
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ        || ೨ ||

ಪವನರ ವರಮತಪ್ರವರನೆನಿಸಿ
ಶ್ರೀವರನರ್ಚಿಸುತಿಹ ಯತಿಕುಲತಿಲಕ                || ೩ ||

ಸರ್ವತ್ರದಿ ಹರಿ ಇರುವುದ ನೋಡಿ
ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ        || ೪ ||

ನೀನೆ ಗತಿಯೊ ಹೇ ದೀನವತ್ಸಲನೆ
ಜ್ಞಾನವನು ಕೊಡು ನಾನೆಂಬುದ ಕಳೆ                || ೫ ||

ಪತಿತನು ನಾ ನಿಮ್ಮತಿಶಯ ಗುಣಗಳ
ತುತಿಸಬಲ್ಲೆನೆ ಯತಿಕುಲವರ್ಯ            || ೬ ||

ಮಾರುತಿವರದ ರಮಾಪತಿವಿಠ್ಠಲನ
ತಾರತಮ್ಯ ತಿಳಿಸ್ಯಾರಾಧನೆ ಕೊಡು                || ೭ ||
***

ಗುರುರಾಯ ಗುರುರಾಯ                || ಪ ||
ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ        || ಅ ||

ನಮಿಸುವೆ ನಿನ್ನಡಿಗಮಿತ ವಿಧದಿ
ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ            || ೧ ||

ಆರ್ತಜನರ ಇಷ್ಟಾರ್ಥಗಳನ್ನೆಲ್ಲ
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ        || ೨ ||

ಪವನರ ವರಮತಪ್ರವರನೆನಿಸಿ
ಶ್ರೀವರನರ್ಚಿಸುತಿಹ ಯತಿಕುಲತಿಲಕ                || ೩ ||

ಸರ್ವತ್ರದಿ ಹರಿ ಇರುವುದ ನೋಡಿ
ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ        || ೪ ||

ನೀನೆ ಗತಿಯೊ ಹೇ ದೀನವತ್ಸಲನೆ
ಜ್ಞಾನವನು ಕೊಡು ನಾನೆಂಬುದ ಕಳೆ                || ೫ ||

ಪತಿತನು ನಾ ನಿಮ್ಮತಿಶಯ ಗುಣಗಳ
ತುತಿಸಬಲ್ಲೆನೆ ಯತಿಕುಲವರ್ಯ            || ೬ ||

ಮಾರುತಿವರದ ರಮಾಪತಿವಿಠ್ಠಲನ
ತಾರತಮ್ಯ ತಿಳಿಸ್ಯಾರಾಧನೆ ಕೊಡು                || ೭ ||
***

ankita ರಮಾಪತಿವಿಠಲ 

ರಾಗ: ಕಾಪಿ ತಾಳ: ಆದಿ


ಗುರುರಾಯ ಗುರುರಾಯ


ದುರಿತ ಕಳೆಯೊ ದಯಾಸಾಂದ್ರ ರಾಘವೇಂದ್ರ ಅ.ಪ


ನಮಿಸುವೆ ನಿನ್ನಡಿಗಮಿತ ವಿಧದಿ

ಮಮ ಶ್ರಮಗಳ ಕಳೆಯೊ ಹೇ ವಿಮಲ ಸುತೇಜ 1

ಆರ್ತ ಜನರ ಇಷ್ಟಾರ್ಥಗಳನೆಲ್ಲ

ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ 2

ಪವನನ ವರಮತ ಪ್ರವರನೆನಿಸಿ

ಶ್ರೀವರನರ್ಚಿಸುತಿಹ ಯತಿಕುಲ ತಿಲಕ 3

ಸರ್ವತ್ರದಿ ಹರಿ ಇರುವುದ ನೋಡಿ

ಪೂರ್ವ ದೇವತೆಗಳ ಗರ್ವಹರನೆ ಮದ್ಗುರುರಾಯ 4

ನೀನೆ ಗತಿಯೊ ಹೇ ದೀನವತ್ಸಲನೆ

ಜ್ಞಾನವನು ಕೊಡು ನಾನೆಂಬುದ ಕಳೆ 5

ಪತಿತನು ನಾ ನಿಮ್ಮತಿಶಯ ಗುಣಗಳ

ತುತಿಸಬಲ್ಲೆನೆ ಯತಿಕುಲವರ್ಯ 6

ಮಾರುತಿವರದ ರಮಾಪತಿವಿಠಲನ

ತಾರತಮ್ಯ ತಿಳಿಸ್ಯಾರಾಧನೆ ಕೊಡು 7

***