Showing posts with label ಆಗಲೆ ಆಗ ನೀ ಕಾಯಬೇಕು ಅಂಬುಜಾಕ್ಷನೆ ಎನ್ನ purandara vittala AAGA NEE AAGALE KAAYABEKU AMBUJAKSHANE ENNA. Show all posts
Showing posts with label ಆಗಲೆ ಆಗ ನೀ ಕಾಯಬೇಕು ಅಂಬುಜಾಕ್ಷನೆ ಎನ್ನ purandara vittala AAGA NEE AAGALE KAAYABEKU AMBUJAKSHANE ENNA. Show all posts

Tuesday, 3 December 2019

ಆಗಲೆ ಆಗ ನೀ ಕಾಯಬೇಕು ಅಂಬುಜಾಕ್ಷನೆ ಎನ್ನ purandara vittala AAGA NEE AAGALE KAAYABEKU AMBUJAKSHANE ENNA

ಪುರಂದರದಾಸರು
ರಾಗ ಸಾವೇರಿ. ಛಾಪು ತಾಳ

ಆಗಲೇ ಕಾಯಬೇಕೋ ಅಂಬುಜಾಕ್ಷನೆ ಎನ್ನ ||ಪ||
ಈಗ ನೀ ಕಾಯ್ದರೇನೊ , ಕಾಯದಿದ್ದರೆ ಏನೊ ||ಅ||

ಅನುಜತನುಜರುಂಟು ಬಹು ಹಣವೊಳಗುಂಟು
ಚಿನ್ನ ಚೀನಾಂಬರವುಂಟು ಉಪ್ಪರಿಗೆಯುಂಟು
ಮೊನ್ನೆ ಹುಟ್ಟಿದ ಗಂಡು ಮಗನೊಬ್ಬನೆನಗುಂಟು
ಸನ್ನೆ ಸಂಜ್ಞೆಗುಂದಿದಾಗ ಸಂಗಡ ಒಬ್ಬರ ಕಾಣೆ ||

ನೆಂಟರಿಷ್ಟರು ಉಂಟು ನೆರೆ ಹೊರೆ ಎನಗುಂಟು
ಬಂಟಬಳಗವುಂಟು ಭಾಗ್ಯವುಂಟು
ಕಂಠದಲ್ಲಿ ಬದ್ಧರಾದ ಕಾಂತೆಯರೆನಗುಂಟು
ಒಂಟಿಯಾಗಿ ಪೋಗುವಾಗ ಸಂಗಡ ಒಬ್ಬರ ಕಾಣೆ ||

ಒಂದು ಕ್ಷಣದಲ್ಲಿ ವಾತ ಪಿತ್ತ ಕಫ ಮೊದಲಾಗಿ
ಸಂಧಿವ್ಯಾಧಿಗಳಿಷ್ಟು ಬಾಧಿಸುತಿರೆ
ಇಂದಿರೇಶ ನಿನ್ನ ನಾಮವೊಂದೇ ಕಾಯುವುದಕೆ
ಬಂದೆನ್ನ ಸಲಹಯ್ಯ ಪುರಂದರವಿಠಲ ||
***


pallavi

AgalE kAyabEkO ambujAkSane enna

anupallavi

I jagati kAidarEno kAyadiddare enna

caraNam 1

anuja tanujaruNTu bahu haNavoLaguNTu cinna ptAmbaravuNTu upparigeyuNTu
monna huTTida gaNDu managobbanenaguNDu sanne samjnygundidAga sangaDa obbara kANe

caraNam 2

neNTariSTaru uNTu nere hore enaguNTu baNDa baLagavuNTu bhAgyavuNTu
kaNThadalli baddharAda kAnteyareneguNDu oNTiyAgi pOguvAga sangaDa obbara kANe

caraNam 3

ondu kSaNadalli vAta pitta kapha modalAgi sandhi vyAdhigaLiSTu bAdhisutire
indirEsha ninna nAmavonde kAyuvudake bandenna salahayya purandara viTTala
***

ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪ

ಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1

ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2

ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
******