ದೇವನಾಡಿಸೋ ಆಟದಲ್ಲಿ ಸಾವಧಾನವ ಪಾಲಿಸೋ
ಜೀವ ಕ್ಷಣಿಕ ದೇಹದಲ್ಲಿ ಜೀವ ಮೋಹವ ತಗ್ಗಿಸೋ
ಎಷ್ಟು ಯೋಚನೆ ಮಾಡಲು ನಾಳೆ ನಿನ್ನಂತಾಗದು
ಎಷ್ಟು ಪಶ್ಚಾತಾಪ ಪಟ್ಟರು ಗತವು ಮರಳಿ ಬಾರದು
ಎಷ್ಟು ಲೆಕ್ಕ ಹಾಕುವೆ ಎಷ್ಟು ಚಿಂತೆಯ ಮಾಡುವೆ
ಎಷ್ಟು ಮಾಡಿದರೆನು ಕಡೆಗೆ ನೀನು ಸತ್ತು ಹೋಗುವೆ
ಎಷ್ಟು ಧನ ಸಿರಿ ಇದ್ದರೆ ನೀನು ತೃಪ್ತಿಯ ಹೊಂದುವೆ
ಎಷ್ಟು ಇದ್ದರು ಬ್ರಷ್ಟ ಮನವನು ಕೆಟ್ಟ ಹಾದಿಗೆ ಕಳಿಸುವೆ
ದುಷ್ಟ ಕರ್ಮದ ಯಾದಿಯು ಕಾಣದು ಕಾಡುವದಿದು
ಸ್ಪಷ್ಟ ನೀನಿರು ನಿಷ್ಠ ಧರ್ಮವು ಸದಾ ರಕ್ಷಣೆ ಕೊಡುವುದು
ಕಷ್ಟ ಸುಖ ಸಾಮಾನ್ಯವು ಹರಿಯ ನಾಟಕ ರಂಗವು
ಶ್ರೇಷ್ಠ ಮೂರುತಿ ರಾಜವಿಠ್ಠಲ ಆಡಿ ಆಡಿಸೋ ಆಟವು
***