Showing posts with label ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ bhupati vittala. Show all posts
Showing posts with label ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ bhupati vittala. Show all posts

Thursday, 5 August 2021

ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ ankita bhupati vittala

..

kruti by bhupati vittalaru ( kakhandaki Ramacharyaru) 


ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ ಪ


ಕರುಣಾಸಾಗರನೆಂಬ ಬಿರುದು ನಿನಗೆ ಉಂಟು ಅ.ಪ


ನಾನು ನನ್ನದು ಎಂಬ 'ೀನ ಬುದ್ದಿಯ ಬಿಡಿಸುಸಾನುರಾಗದಿ ಮನಸನು ಧರ್ಮದಲ್ಲಿರಿಸುಮಾನಾಪಮಾನಕ್ಕೆ 'ಗ್ಗದೆ ಕುಗ್ಗದೆಧ್ಯಾನಾನಂದದೊಳೆನ್ನ ಇರಿಸಯ್ಯಾ ಸ್ವಾ'ು 1

ದೇಹ ನನ್ನದು ಎಂಬ ದುರಭಿಮಾನವ ಬಿಡಿಸುದೇಹಾನುಬಂಧುಗಳ ಮೋಹಬಿಡಿಸುದೇಹಗೇಹಗಳೆಲ್ಲ ದೇವರ ಸ್ವತ್ತೆಂಬಸುಜ್ಞಾನವನು ಕೊಟ್ಟು ಸಲುಹಯ್ಯಾ ಸ್ವಾ'ು 2

ದುಷ್ಟ ಬುದ್ಧಿಯು ಎನಗೆ ಹುಟ್ಟದಂತೆ ಮಾಡುಕೆಟ್ಟಜನರ ಗಾಳಿ ತಟ್ಟದಿರಲಿಎಷ್ಟು ಬೇಕಾದಷ್ಟು ಕಷ್ಟಬಂದರು ಸಹಗಟ್ಟ್ಯಾಗಿ ನಿನ್ನಲ್ಲಿ ಭಕ್ತಿಹುಟ್ಟಲಿ ಸ್ವಾ'ು 3

ಭೇದ ಅಭೇದದ ಮರ್ಮವ ತಿಳಿಸಯ್ಯಾಸಾಧು ಸಜ್ಜನರ ಸಂಗದೊಳೆನ್ನ ಇರಿಸುಮೋದತೀರ್ಥರ ಮತದ ಸುಜ್ಞಾನವನು ಕೊಟ್ಟುಭೂದೇವ ವಂದ್ಯ ಭೂಪತಿ 'ಠ್ಠಲನ ತೋರು 4

***

ankita ಭೂಪತಿವಿಠಲ   

ರಾಗ: ಬಿಭಾಸ  ತಾಳ: ತ್ರಿ


ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ   ಪ


ಕರುಣಾ ಸಾಗರನೆಂಬ ಬಿರುದು ನಿನಗೆ ಉಂಟು  ಅ. ಪ


ನಾನು ನನ್ನದು ಎಂಬ ಹೀನ ಬುದ್ಧಿಯ ಬಿಡಿಸು

ಸಾನುರಾಗದಿ ಮನಸು ಧರ್ಮದಲ್ಲಿರಿಸು

ಮಾನಾಪಮಾನಕ್ಕೆ ಹಿಗ್ಗದೆ ಕುಗ್ಗದೆ

ಧ್ಯಾನಾನಂದದೊಳೆನ್ನ ಇರಿಸಯ್ಯಾ ಸ್ವಾಮಿ  1

ದೇಹ ನನ್ನದು ಎಂಬ ದುರಭಿಮಾನವ ಬಿಡಿಸು

ದೇಹಾನು ಬಂಧುಗಳ ಮೋಹ ಬಿಡಿಸು

ದೇಹ ಗೇಹಗಳೆಲ್ಲ ದೇವರ ಸ್ವತ್ತೆಂಬ

ಸುಜ್ಞಾನವನು ಕೊಟ್ಟು ಸಲುಹಯ್ಯಾ ಸ್ವಾಮಿ  2 

ದುಷ್ಟ ಬುದ್ಧಿಯು ಎನಗೆ ಹುಟ್ಟದಂತೆ ಮಾಡು

ಕೆಟ್ಟ ಜನರ ಗಾಳಿ ತಟ್ಟದಿರಲಿ

ಎಷ್ಟು ಬೇಕಾದಷ್ಟು ಕಷ್ಟ ಬಂದರು ಸಹ

ಗಟ್ಟ್ಯಾಗಿ ನಿನ್ನಲ್ಲಿ ಭಕ್ತಿ ಹುಟ್ಟಲಿ ಸ್ವಾಮಿ  3

ಭೇದ ಅಭೇದದ ಮರ್ಮವ ತಿಳಿಸಯ್ಯಾ

ಸಾದು ಸಜ್ಜನರ ಸಂಗದೊಳೆನ್ನ ಇರಿಸು

ಮೋದ ತೀರ್ಥರ ಮತದ ಸುಜ್ಞಾನವನು ಕೊಟ್ಟು

ಭೂದೇವ ವಂದ್ಯ ಭೂಪತಿವಿಠಲನ ತೋರು  4

***