Showing posts with label ಪಾಲಿಸೆನ್ನ ಕಾಪಾಲಿಯೆ ನೀನು sirigovinda vittala. Show all posts
Showing posts with label ಪಾಲಿಸೆನ್ನ ಕಾಪಾಲಿಯೆ ನೀನು sirigovinda vittala. Show all posts

Monday, 2 August 2021

ಪಾಲಿಸೆನ್ನ ಕಾಪಾಲಿಯೆ ನೀನು ankita sirigovinda vittala

ರುದ್ರ ದೇವರ ಸ್ತುತಿ


ಪಾಲಿಸೆನ್ನ ಕಾಪಾಲಿಯೆ ನೀನು ಪ


ಪಾಲಿಸುಯನ್ನ ಕಾಪಾಲಿಯೆ ತ್ವರ ಗೋಪಾಲನಂಘ್ರಿ

ಯುಗ ವಾಲಗ ಕೊಟ್ಟು ಅ.ಪ


ನೀ ಮಹದೌಷಧಿ ಕಾಮಾದಿಗಳೆಂಬಾಮಯ

ಸ್ತೋಮಕೆ ಹೇ ಮಮಸ್ವಾಮಿ 1


ನೀ ಕಾಯದೆ ಬಿಡೆ ಕಾಯಜ ಭಯ

ನೂಕೆಯನ್ನ ಕಡೆಗ್ಹಾಕುವರ್ಯಾರೈ 2


ತಿಂಗಳಚೂಡ ತ್ರಿಗಂಗಳ ಶೋಭಿತ

ಅಂಗಜ ರಿಪು ಭಸಿತಾಂಗನೆ ಲಿಂಗಾ 3


ನಾಕರಮುಗಿಯುವೆನು ನಾಕಪನುತ ರ

ತ್ನಾಕರ ಸುತೆವರನಾ ಕರತಾರೋ 4


ಕಂದನು ಇವನೆಂತೆಂದು ಎನ್ನ ನೀ

ಮುಂದಕೆ ಕರೆಯೈ ನಂದಿಶ್ಯಂದನಾ 5


ಅರ್ಧಂಗನ ವಪುಸ್ವರ್ಧುನಿಧರಾ ಅಘ

ಮರ್ದನ ಕಾಯೋ ಕಪರ್ದಿಯೆ ನಿರುತಾ 6


ಅದ್ರಿಜ ಪತಿ ಮಹರುದ್ರನೆ ನಮಿಸುವೆ

ಕ್ಷುದ್ರ ಮನಸಿನ ಉಪದ್ರವ ಬಿಡಿಸಿ 7


ದುರ್ಜನರರಿ ಖತಿವರ್ಜಿತ ಪಾಲಿಸೋ

ನಿರ್ಜರನುತನ ಗುರು ಅರ್ಜುನ ವರದಾ 8


ನೀನೊಲಿಸಿದ ಸಿರಿಗೋವಿಂದವಿಠಲನ

ಪಾವನ ಮೂರುತಿ ಕೋವಿದರೊಡೆಯ 9

****