Showing posts with label ತೆರಳಿದರು ತೆರಳಿದರು ಹರಿಯ ಪುರಕೆ ಪುರ ಬಲ್ಲಟಗಿಯ abhinava pranesha vittala shyamasundara dasa stutih. Show all posts
Showing posts with label ತೆರಳಿದರು ತೆರಳಿದರು ಹರಿಯ ಪುರಕೆ ಪುರ ಬಲ್ಲಟಗಿಯ abhinava pranesha vittala shyamasundara dasa stutih. Show all posts

Saturday, 1 May 2021

ತೆರಳಿದರು ತೆರಳಿದರು ಹರಿಯ ಪುರಕೆ ಪುರ ಬಲ್ಲಟಗಿಯ ankita abhinava pranesha vittala shyamasundara dasa stutih

 ರಾಗ : ಭೈರವಿ ತಾಳ : ಆದಿ


ತೆರಳಿದರು ತೆರಳಿದರು 

ಹರಿಯ ಪುರಕೆ ।

ಪುರ ಬಲ್ಲಟಗಿಯ 

ವರಕವಿ ಶ್ಯಾಮಸುಂದರರು ।। ಪಲ್ಲವಿ ।।


ವೀರ ವೈಷ್ಣವರಲ್ಲಿ 

ಜನಿಸುತಲಿ ಮಾನವಿಯ ।

ಧಾರುಣಿಪ ದಾಸರ 

ಒಲಿಮೆ ಪಡೆದು ।

ಈರ ಮತ ತತ್ತ್ವಗಳ ।

ಪಾರ ಮಹಿಮೆಗಳ 

ಚಾರು ಪದ ಪದ್ಯದಿಂ ।

ಸಾರಿ ನಲಿದವರು ।। ಚರಣ ।।


ಮೂಕ ಬಧಿರರ ತೆರದಿ ।

ಲೋಕಕ್ಕೆ ತೋರುತಲಿ ।

ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ 

ಈ ಕುಂಭಿಣಿಯೊಳು ।

ಸಾಕೆಂದು ತ್ವರಿತದಲಿ ।

ಕಾಕೋದರಾಗ್ರಾಜನ 

ನಾಮ ಘರ್ಜನೆಗೈದು ।। ಚರಣ


ದುರ್ಮುಖ ಸಂವತ್ಸರದಿ । ವೃಷ 

ಭ ಮಾಸದ । ಶು ।

ಕ್ಲ ಮೂರು ತಿಥಿ 

ಶುಕ್ರವಾರ ಹಗಲು ।

ನಿರ್ಮಲಾನಂದದಿ 

ಲಯವನ್ನು ಚಿಂತಿಸುತ ।

ಭರ್ಮಪಿತ ಅಭಿನವ 

ಪ್ರಾಣೇಶವಿಠಲನ್ನ ನೆನೆಯುತ ।। ಚರಣ ।।

***