Saturday, 1 May 2021

ತೆರಳಿದರು ತೆರಳಿದರು ಹರಿಯ ಪುರಕೆ ಪುರ ಬಲ್ಲಟಗಿಯ ankita abhinava pranesha vittala shyamasundara dasa stutih

 ರಾಗ : ಭೈರವಿ ತಾಳ : ಆದಿ


ತೆರಳಿದರು ತೆರಳಿದರು 

ಹರಿಯ ಪುರಕೆ ।

ಪುರ ಬಲ್ಲಟಗಿಯ 

ವರಕವಿ ಶ್ಯಾಮಸುಂದರರು ।। ಪಲ್ಲವಿ ।।


ವೀರ ವೈಷ್ಣವರಲ್ಲಿ 

ಜನಿಸುತಲಿ ಮಾನವಿಯ ।

ಧಾರುಣಿಪ ದಾಸರ 

ಒಲಿಮೆ ಪಡೆದು ।

ಈರ ಮತ ತತ್ತ್ವಗಳ ।

ಪಾರ ಮಹಿಮೆಗಳ 

ಚಾರು ಪದ ಪದ್ಯದಿಂ ।

ಸಾರಿ ನಲಿದವರು ।। ಚರಣ ।।


ಮೂಕ ಬಧಿರರ ತೆರದಿ ।

ಲೋಕಕ್ಕೆ ತೋರುತಲಿ ।

ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ 

ಈ ಕುಂಭಿಣಿಯೊಳು ।

ಸಾಕೆಂದು ತ್ವರಿತದಲಿ ।

ಕಾಕೋದರಾಗ್ರಾಜನ 

ನಾಮ ಘರ್ಜನೆಗೈದು ।। ಚರಣ


ದುರ್ಮುಖ ಸಂವತ್ಸರದಿ । ವೃಷ 

ಭ ಮಾಸದ । ಶು ।

ಕ್ಲ ಮೂರು ತಿಥಿ 

ಶುಕ್ರವಾರ ಹಗಲು ।

ನಿರ್ಮಲಾನಂದದಿ 

ಲಯವನ್ನು ಚಿಂತಿಸುತ ।

ಭರ್ಮಪಿತ ಅಭಿನವ 

ಪ್ರಾಣೇಶವಿಠಲನ್ನ ನೆನೆಯುತ ।। ಚರಣ ।।

***

No comments:

Post a Comment