Saturday, 1 May 2021

ನೋಡಿರೈ ಸುಧರ್ಮೇಂದ್ರ ಗುರುಗಳ ನೋಡಿರೈ ankita gurutandegopala vittala sudharmendra teertha stutih

sudharmendra teertha rayara mutt yati 1870 stutih

ಶ್ರೀ ಗುರು ತಂದೆ ಗೋಪಾಲವಿಠ್ಠಲ 


ನೋಡಿರೈ ಸುಧರ್ಮೇಂದ್ರ -

ಗುರುಗಳ ನೋಡಿರೈ ।

ಈಡು ಯಿಲ್ಲದವರಾನಾಡೊಳಗೆ ।

ಬೇಡಿದಾಭೀಷ್ಟ ನೀಡುತಲಿ -

ನಲಿದಾಡುತಲಿ ಬರುವರಾ ।। ಪಲ್ಲವಿ ।।


ಸಪ್ತ ಪಂಚರುಣೋದಯ ಕಾಲದಿ ।

ನಿತ್ಯ ಸ್ನಾನವ ಮಾಡಿ ।

ಎಪ್ಪತ್ತೆರಡು ಮಹಾ -

ಮಂತ್ರಗಳನು ।

ನಿತ್ಯ ಬಿಡದೆ ಮಾಡಿ -

ಭೃತ್ಯ ಜನರಿಗೆ ।।

ಚಿತ್ತ ಪೂರ್ಣರ ಚಿತ್ತ -

ಶಾಸ್ತ್ರವ ನೀಡಿ ।

ಕ್ಷೇತ್ರ ಮೂರ್ತಿಯಾ -

ಮೂರ್ತಿ ಮೂರ್ತಿಯಾ ।

ತೀರ್ಥ ಮೂರ್ತಿಯಾ -

ಸ್ಫೂರ್ತಿಯಲಿಡುತಿಹರು ।। ಚರಣ ।।


ಮೂರು ನಾಲ್ಕು ಚಾರು ಅನ್ನವ ।

ಮೂರು ಈರರಿ ಗುಣಿಸಿ ।

ಮೂರು ಅನ್ನವಾ ಮೂಲರಾಮಗೆ ।

ಪಾರ ಸುರರಿಗೊಂದು ।।

ಚಿರ ಪಿತೃಗಳಿಗೊಂದು -

ಪಶುವಿಗೆ ಭೂಸುರರಿಗೆ ವೊಂದು ।

ಚಾರು ಚತುರಾನ್ನವ ಷಡ್ರಸಗಳ ।

ಆರು ನಾಲ್ಕು ಸಾರರುಣಿಸುವರಾ ।। ಚರಣ ।।


ಆರು ಆರು ಎರಡು -

ಸಾವಿರ ನಾಡಿಗಳಲಿ ।

ಹರಿಯಾ ಆರು -

ನಾಲ್ಕು ನೂರರಿಂರೆನ ।

ಸಾರದಿಂದಲಿ ತುತಿಯಾ ।

ಬ್ಯಾರೆ ಬ್ಯಾರೆ ಸ್ವರ ವ್ಯಂಜನದಲಿ ।।

ಸಾರಭೋಕ್ತ್ರನ ಮತಿಯಾ ।

ಸಾರ ಗುರು ತಂದೆ ಗೋಪಾಲವಿಠ್ಠಲನ್ನ ।

ಚಾರು ಚರಣವ ಸೇರಿ ಭಜಿಪರಾ ।। ಚರಣ ।।

****


No comments:

Post a Comment