ಮನ ಬಲಿಯದನಕ ಅನುಕೂಲಾಗದನುಭವ ಪ
ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1
ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2
ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3
ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ ಜ್ಞಾನದೇ ತಾ ಸನ್ಮತ ಮುನಿಜನರ ಸುಪಥ 4
ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5
***