Showing posts with label ಶೇಷಶಯನನೊಲಿದೀವ ಭಾಗವತ ಜನರಿಗೆ neleyadikeshava. Show all posts
Showing posts with label ಶೇಷಶಯನನೊಲಿದೀವ ಭಾಗವತ ಜನರಿಗೆ neleyadikeshava. Show all posts

Wednesday, 16 October 2019

ಶೇಷಶಯನನೊಲಿದೀವ ಭಾಗವತ ಜನರಿಗೆ ankita neleyadikeshava

ಶೇಷಶಯನನೊಲಿದೀವ ಭಾಗವತ ಜನರಿಗೆ ಪ

ಭಯ ಭಕ್ತಿ ಮಂತ್ರಗಿಂತ್ರಗಳ ವಾದಬಯಲು ದೈವಂಗಳವುಷದಿಗಿವುಷದಿಜಯಾಪಜಯವೆಂಬ ಜನ್ಮಪ್ರಕೃತಿ - ತಾಪತ್ರಯಗಳೆಂಬ ತಾಮಸಗೀಮಸವಯಸಿಗೆ ಬಾರದ ಸುಜ್ಞಾನ ಗಿಜ್ಞಾನ - ನಿರ್ಣಯಗಳಾಗದ ಮಂತ್ರದರ್ಥಗಿರ್ಥನಯದಿಂದ ನರಹರಿಯ ಹೊಗಳುವರಿಗೆ ಶೇಷಶಯನನೊಲಿದೀವ ಭಾಗವತ ಜನರಿಗೆ 1

ಕಾಲ ಮೃತ್ಯು ಕಂಟಕಗಳ ಕಷ್ಟಗಿಷ್ಟ ಸುಖಾನು-ಕೂಲಗಿನುಕೂಲ ದಾರಿದ್ರ್ಯ ದುಕ್ಕಗಿಕ್ಕಮೇಲೆ ಬಹ ನಿಂದೆ ನಿಷ್ಠೂರಗಿಷ್ಠೂರ - ಭೂಪಾಲರಟ್ಟುಳಿ ವಾಕು ವಾದಗೀದಶೀಲ ಸೂತಕ ನೇಮಗೀಮ - ದೇವತಾ ಪ್ರಸ್ತಕಾಲದಲಿ ಮಾಳ್ಪ ಉಪವಾಸಗಿಪವಾಸನಾಲಗೆಯ ಮೇಲೆ ಅನವರತ ಹೊಗಳುವ ಗೋ-ಪಾಲಕೃಷ್ಣ ಭಾಗವತ ಜನರಿಗೆ 2

ಹಿಡಿತಬಿಡಿತಗಳೆಂಬ ಹಿಂಚುಮುಂಚುಗಳು ಪರರೊಡವೆಯ ಮೇಲಣಾಸೆಗೀಸೆನಡವಳಿಕೆ ದೋಷ ಪ್ರಾಯಗೀಯ ದ್ವಿಜಗಿತ್ತ ದು-ರ್ನುಡಿಗಳಾಡಿದರೆಂಬ ನೋವುಗೀವುಮಡದಿ ಮಕ್ಕಳು ಭೂಮಿಕ್ಷೇತ್ರ ದೋಹ ಮಾನ ಒಂ-ದೆಡರು ಬಂದೀತೆಂಬ ಚಿಂತೆಗಿಂತೆಪೊಡವಿ ಪತಿ ನರರುಲಿಯೆ ಜಿಹ್ವಾಗ್ರ ಮಧ್ಯದಲಿಪಡೆದು ಪಾಡುವ ಭಾಗವತ ಜನರಿಗೆ 3

ತೀರ್ಥಯಾತ್ರೆಯ ಗಮನಗಿಮನ - ಮನ್ನಣೆಯವರಕೂರ್ತು ಫಲವೀವ ಕೋರಿಕೆಗೀರಿಕೆಪ್ರಾರ್ಥನೆಯ ಹರಕೆ ಹರಿದಿನಗಿರಿದಿನಗಳೆಂಬ ಬಹುವಾರ್ತೆಯುನ್ನತಿಸುವ ದಿವಸಗಿವಸಧೂರ್ತ ಪ್ರಭಾವ ನಿಗಳಂ ಮತ್ತೆ ಮೋ-ಕ್ಷಾರ್ಥ ಬೇಕೆಂಬ ಸಂದೇಹಗಿಂದೇಹಧೂರ್ತ ಭಂಜನ ಲಕ್ಷ್ಮೀ ಮನೋಹರನ ಸಂ-ಕೀರ್ತಿಸುತಿಹ ಭಾಗವತ ಜನರಿಗೆ 4

ಎಲ್ಲಿಹುದು ಸರ್ವಸಂಗ ಪರಿತ್ಯಾಗವು ಮ-ತ್ತೆಲ್ಲಿಹುದು ಸುe್ಞÁನಯೋಗಿಗಳಿಗೆಎಲ್ಲಿಹುದು ಯಾತ್ರಾಚಾರಂಗಳಿತರರಿಗೆಎಲ್ಲಿಹುದು ನಿತ್ಯ ನಿರ್ಮಳ ಹರಿಗೆಎಲ್ಲಿಹುದು ಹರಿಯ ದಾಸಾನುದಾಸರಿಗೆ ಮ-ತ್ತೆಲ್ಲಿಹುದು ಪರಬ್ರಹ್ಮ ಪುತ್ಥಳಿಗೆಬಲ್ಲಿದನು ಕಾಗಿನೆಲೆಯಾದಿ ಕೇಶವನಲ್ಲದಿಲ್ಲೆನುತಿಹ ಭಾಗವತ ಜನರಿಗೆ 5
*******