Showing posts with label ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು narasimhavittala. Show all posts
Showing posts with label ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು narasimhavittala. Show all posts

Tuesday 3 August 2021

ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ನೋಡಿದ್ಯಾ ನೋಡಿದ್ಯಾ ಪ


ನೋಡಿದ್ಯಾ ಶ್ರೀ ಗುರುಗಳನ್ನು | ಈ ಪಾಡಿ ಕೊಂಡಾಡಿದ್ಯಾ

ಆಹಾ ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ

ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ


ನಿಂತರೆದುರಲ್ಲೆ ಮುಖ್ಯ ಪ್ರಾಣಾ | ಜಗ

ದಂತ ರೊಳಗೆಲ್ಲಿ ಅತಿ ಪ್ರಾಣಾ

ಅಂತರಂಗದಲ್ಲಿ ಶಾಂತ ಮೂರುತಿಗಳು

ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ 1


ಹೊದ್ದ ಕಾವೀಶಾಟಿಯಿಂದಾ ಶ್ರೀ

ಮುದ್ರೆ ಹಚ್ಚಿದ ದೇಹ ದಿಂದಾ

ಮಧ್ಯದಿ ಕೇಸರಿ ಗಂಧಾ | ಬಲು

ಮುದ್ದು ಸುರಿವನಾಮದಿಂದಾ

ತಿದ್ದಿದ ಅಂಗಾರ ಮುದ್ರೆಯೊಳಕ್ಷತೆ

ಎದ್ದು ಬರೂವಂಥ ಮುದ್ದು ಗುರೂಗಳಾ 2


ಮುದ್ದು ಬೃಂದಾವನದ ಮಾಟಾ

ಅಲ್ಲಿದ್ದು ಜನರ ಓರೆನೋಟಾ

ಪ್ರಸಿದ್ದ ರಾಯರ ಪೂರ್ಣನೋಟ

ನಮ್ಮಲ್ಲಿದ್ದ ಪಾಪಗಳೆಲ್ಲ ಓಟ

ಹದ್ದು ವಾಹನ ನರಸಿಂಹ ವಿಠಲಾ | ಅ

ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ 3

***