Showing posts with label ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ krishnavittala. Show all posts
Showing posts with label ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ krishnavittala. Show all posts

Monday, 2 August 2021

ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ankita krishnavittala

ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ


ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ

ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು

ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ.


ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು

ರಾಗದಿನೋಡುತ ಬಗೆ ಬಗೆ ಹರ್ಷದ

ನಗೆಮೊಗಹಾಸದಿ ಬಿಗಿಯುತ ಮನ

ನಿಗಮಾಗಮ ವಂದಿತ ಅಗಣಿತ ಗುಣನಿಧಿ 1

ಸಾಗರನಳಿಯನೆ ಸಾಗರಶಯನನೆ

ಯಾಗ ಸುಭೋಕ್ತನೆ ಯೊಗಿಗಳರಸನೆ

ಬಾಗುವೆ ಚರಣದಿ ಸಾಗುತ ಮನ ಬಡ ಬಡ

ನೀಗಿಸಿ ಮಲಮನದಾಗಸಗೀಗಲೆ 2

ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ

ತನುಮನವೆಲ್ಲವ ಮಿನುಗಿಸಿ e್ಞÁನವÀ

ಧಣಧಣ ತಾಳಕೆ ಅಭಿನಯಸಹಿತದಿ

ಕುಣಿಯುತ ಕುಣಿಸುತ ದಣಿಸದೆ ಕರುಣದಿ 3

ಕರ್ಜಿಸಿ ರಾಮದ ಕಜ್ಜಿಯಮನದಿಂ

ಮಜ್ಜನಗೈಸುತ ಭಕ್ತಿಯಕಡಲಲಿ

ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ-

ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4

ಇಂದಿರೆಯರಸನೆ ಚಂದ್ರನ ಹಳಿವನೆ

ಛಂದಸುವೇದ್ಯನೆ ಬಂಧ ಸುಮೋಚಕ

ಬಂಧುವೆ ಸರ್ವರ ಮಂದಜಭವಪಿತ

ತಂದೆಯೆ ವಿಶ್ವದ ನಂದವ ನೀಡಲು 5

ವೇದವ ತಂದವ ವೇದನ ಪೊರೆದವ

ಭೂಧರ ಪೊತ್ತವ ಮಾಧವನಾದವ

ಮೋದವ ತಂದವ ಖೇದವ ತರಿದವ

ಮೇದಿನಿ ಪೊರೆದವ ಛೇದಿಸಿ ಬಂದವ 6

ಮೇದಿನಿ ಅಳೆದವ ಮೇದಿನಿ ಇತ್ತವ

ಮೇದಿನಿಸುತೆಯಳ ಮೋದದಲಾಳ್ದವ

ಮೇದಿನಿಸುತಹರ ವೇದವ ಕಾಯ್ದವ

ಛೇದಿಸಿ ಕಲಿಗಣ ಹಾದಿಯ ತೊರುವ 7

ನಂದನಂದ ಅರವಿಂದ ನಯನ ಬಹು

ಸುಂದರತಮಶ್ರೀ ಮಂದಿರ ಗೋಕುಲ

ಚಂದಿರ ಶುಭಗುಣಸಾಂದ್ರ ಮಹೋಜಸ

ಇಂದ್ರನ ಹಳಿದ ಮಹೇಂದ್ರ ಪರಾತ್ಪರ8

ಗೋಪಿಕಂದ ಬಹು ಗೋಪಿಕಾಮಸ್ತ್ರೀ

ರೂಪಧಾರಿ ನಗಚಾಪವರದ ಶಿವ

ಚಾಪ ಭಂಗ ಭವತಾಪ ಹರಣ ನಿ-

ರ್ಲೇಪ ದುಃಖ ಸುಖಲಾಪ ಚರಿತ ಭಗ 9

ವಾಸುದೇವ ಸಂತೋಷದಾತ ಗೋಕೇಶವೇದ್ಯ

ವಾಗೀಶ ಜನಕ ನಿಜದಾಸಪೋಷ ಖಳ-

ನಾಶ ಶಕ್ತ ರವಿಭಾಸ ದಾತ ಮಹಿ-

ದಾಸಪೂರ್ಣವಿಭು 10

ಕಂಸ ವೈರಿ ಕುರುವಂಶ ಧ್ವಂಸ ನಿಜ

ಹಂಸರೂಪ ಯದುವಂಶ ಚಂದ್ರ ನೀ-

ಲಾಂಶುಧಾಮ ಗರುಡಂಸಗಮನ ಭವ

ಹಿಂಸೆ ದಮನ ದೇವಾಂಶಗಣಪೋಷ 11

ತುಂಬಿರೆಜಯಜಯ ದುಂಧುಭಿನಾದವು

ಅಂಬರಸುರಗಣ ವರ್ಷಿಸೆಕುಸುಮವ

ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ

ಕಂಬು ಚಕ್ರಾಂಕಿತ ಪಾಣಿಯೆಸರಸರ 12

ಮಂಗಳಮೂರ್ತಿಯೆ ಮಂಗಲ ದಾತನೆ

ಅಂಗಜರಿಪುಗಳ ಭಂಗವ ಹರಿಸುತ

ತಿಂಗಳು ಬೆಳಕಿನ ತುಂಗ ಸುರೂಪವ

ಕಂಗಳು ಮನಸಿನ ಸಂಗದಿ ತೋರುತ13

ಸಾಸಿರ ಶಿರಮುಖ ಸಾಸಿರ ನೇತ್ರನೆ

ಸಾಸಿರ ಬಾಹುವೆ ಸಾಸಿರನಾಮಕ

ಸಾಸಿರಕೀರ್ತಿನಿರ್ದೋಷ ಸುಖಪೂರ್ಣ

ಶ್ವಾಸವಿನುತ ವಿಶ್ವಾಸವ ಬೀರುತ 14

ಜಯಮುನಿ ಹೃದಯಗ ವಾಯು ವಿನಾಯಕ

ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ

ಪ್ರೇಮದ ಮನವಳಿದ ಹೇಯದು ನಿನ್ನಯ

ಧೇಯವೆ ನಡೆಸುತ ಶ್ರೀ ಯವ ನೀಡಲು 15

****