Showing posts with label ವೃಂದಾವನ ನೋಡಿರೋ ನೀವೆಲ್ಲ ankita gurugovinda vittala VRUNDAVANA NODIRO BRAHMANYA TEERTHA STUTIH. Show all posts
Showing posts with label ವೃಂದಾವನ ನೋಡಿರೋ ನೀವೆಲ್ಲ ankita gurugovinda vittala VRUNDAVANA NODIRO BRAHMANYA TEERTHA STUTIH. Show all posts

Sunday, 6 June 2021

ವೃಂದಾವನ ನೋಡಿರೋ ನೀವೆಲ್ಲ ankita gurugovinda vittala VRUNDAVANA NODIRO BRAHMANYA TEERTHA STUTIH

 Audio by Vidwan Sumukh Moudgalya

 ಶ್ರೀ ಗುರುಗೋವಿಂದದಾಸರು ಶ್ರೀ ಬ್ರಹ್ಮಣ್ಯತೀರ್ಥರನ್ನು ಕುರಿತು ಮಾಡಿರುವಂತಹ ಕೃತಿ


 ರಾಗ : ಅಠಾಣ    ಆದಿತಾಳ


ವೃಂದಾವನ ನೋಡಿರೋ ನೀವೆಲ್ಲ ॥ಪ॥

ವೃಂದಾವನ ನೋಡಿ ಆನಂದವನ್ನೆ ಪೊಂದಿರೊ ॥‌ಅ.ಪ॥


ರಾಮಾಚಾರ್ಯರ ಪುತ್ರರೊ ಅವರು 

ಮಾಮನೋಹರ ನೃಹರಿ ದೂತರೋ

ಜನ್ಮ ಅಷ್ಟಕೆ ಬ್ರಹ್ಮಚರ್ಯ ಪೊಂದಿ

ಬ್ರಹ್ಮ ವಿದ್ಯೆಯ ಪಡೆದರೊ

ಪ್ರೇಮದಿಂದಲಿ ಬಂದು ತಾವು 

ಪುರುಷೋತ್ತಮರ ಸಾರ್ದರೋ ॥೧॥


ಕಾಯಜ ಪಿತನ ತಾನ್ವೊಲಿಸಿ ದೇಶಂಗಳ

ಪ್ರಿಯದಿಂದಲಿ ಸಂಚರಿಸಿ

ಮಾಯಾ ರಮಣನೂ ಜೀವನೂ ಒಂದೆಂಬ

ಮಾಯಾವಾದಿಗಳ ತರಿದು

ವಾಯುಮತ ಪ್ರೀತಿಯಲಿ ಅರುಹುತ

ಪ್ರಿಯ ಅಬ್ಬೂರಲಿ ನೆಲೆಸಿದ ॥೨॥


ವಿಠ್ಠಲ ನೃಹರಿ ಪೂಜೆಗೆ ನೇಮಿಸಿ ತಮ್ಮ

ಪಟ್ಟದ ಶಿಷ್ಯರು ವ್ಯಾಸತೀರ್ಥರ

ಅಟ್ಟಹಾಸದಿ ಸರ್ವಜಿತು ಸಂವತ್ಸರ

ಕೃಷ್ಣ ಏಕಾದಶಿ ವೈಶಾಖ

ದಿಟ್ಟ ಗುರುಗೋವಿಂದವಿಠ್ಠಲನ

ದೃಷ್ಟಿಸಿ ತನು ಬಿಟ್ಟು ಪೊರಟನ ॥೩॥

***


ಶ್ರೀ ಗುರು ಗೋವಿಂದ ದಾಸರು - ಮೈಸೂರು 


ವೃಂದಾವನ ನೋಡಿರೋ ನೀವೆಲ್ಲ ।

ವೃಂದಾವನ ನೋಡಿ । ಆ ।

ನಂದವನ್ನೆ ಪೊಂದಿರೊ ।। ಪಲ್ಲವಿ ।।


ರಾಮಾಚಾರ್ಯರ ಪುತ್ರರೋ ಅವರು ।

ಮಾಮನೋಹರ ನೃಹರಿ ದೂತರೋ ।

ಜನ್ಮ ಅಷ್ಟಕೆ ಬ್ರಹ್ಮಚರ್ಯ ಪೊಂದಿ ।

ಬ್ರಹ್ಮ ವಿದ್ಯೆಯ ಪಡೆದರೊ ।

ಪ್ರೇಮದಿಂದಲಿ ಬಂದು -

ತಾವು । ಪುರುಷೋ ।

ತ್ತಮರ ಸಾರ್ದರೊ ।। ಚರಣ ।।


 ಕಾಯಜ ಪಿತನ ತಾನ್ವೊಲಿಸಿ ದೇಶಂಗಳ ।

ಪ್ರಿಯದಿಂದಲಿ ಸಂಚರಿಸಿ ।

ಮಾಯಾ ರಮಣನೂ ಜೀವನೂ ಒಂದೆಂಬ ।

ಮಾಯಾವಾದಿಗಳ ತರಿದು ।

ವಾಯು ಮತ ಪ್ರೀತಿಯಲಿ ಅರುಹುತ ।

ಪ್ರಿಯ ಅಬ್ಬೂರಲಿ ನೆಲೆಸಿದ ।। ಚರಣ ।।


ವಿಠ್ಠಲ ನೃಹರಿ ಪೂಜೆಗೆ ನೇಮಿಸಿ ತಮ್ಮ ।

ಪಟ್ಟದ ಶಿಷ್ಯರು ವ್ಯಾಸತೀರ್ಥರ ।

ಅಟ್ಟಹಾಸದಿ ಸರ್ವಜಿತು ಸಂವತ್ಸರ ।

ಕೃಷ್ಣ ಏಕಾದಶೀ ವೈಶಾಖ ।

ದಿಟ್ಟ ಗುರು ಗೋವಿಂದ ವಿಠ್ಠಲನ ।

ದೃಷ್ಟಿಸಿ ತನು ಬಿಟ್ಟು ಪೊರಟನ ।। ಚರಣ ।। 

*****

ಶ್ರೀ ವ್ಯಾಸರಾಜ ಗುರುಸಾರ್ವಭೌಮರು  " ನ್ಯಾಯಾಮೃತ " ದಲ್ಲಿ ಸ್ತುತಿಸಿದ ಬ್ರಹ್ಮಣ್ಯತೀರ್ಥರ ಶ್ಲೋಕ


ಸಮುತ್ಸಾರ್ಯತಮಃಸ್ತೋಮಃ

ಸನ್ಮಾರ್ಗ ಸಂಪ್ರಕಾಶ್ಯಚ।

ಸದಾ ವಿಷ್ಣುಪದಾಸಕ್ತಂ

ಸೇವೇ ಬ್ರಹ್ಮಣ್ಯಭಾಸ್ಕರಮ್॥


 ಶ್ರೀ ಗುರುಗೋವಿಂದದಾಸರು ಶ್ರೀ ಬ್ರಹ್ಮಣ್ಯತೀರ್ಥರನ್ನು ಕುರಿತು ಮಾಡಿರುವಂತಹ ಕೃತಿ


 ರಾಗ : ಅಠಾಣ    ಆದಿತಾಳ


ವೃಂದಾವನ ನೋಡಿರೋ ನೀವೆಲ್ಲ ॥ಪ॥

ವೃಂದಾವನ ನೋಡಿ ಆನಂದವನ್ನೆ ಪೊಂದಿರೊ ॥‌ಅ.ಪ॥


ರಾಮಾಚಾರ್ಯರ ಪುತ್ರರೊ ಅವರು 

ಮಾಮನೋಹರ ನೃಹರಿ ದೂತರೋ

ಜನ್ಮ ಅಷ್ಟಕೆ ಬ್ರಹ್ಮಚರ್ಯ ಪೊಂದಿ

ಬ್ರಹ್ಮ ವಿದ್ಯೆಯ ಪಡೆದರೊ

ಪ್ರೇಮದಿಂದಲಿ ಬಂದು ತಾವು 

ಪುರುಷೋತ್ತಮರ ಸಾರ್ದರೋ ॥೧॥


ಕಾಯಜ ಪಿತನ ತಾನ್ವೊಲಿಸಿ ದೇಶಂಗಳ

ಪ್ರಿಯದಿಂದಲಿ ಸಂಚರಿಸಿ

ಮಾಯಾ ರಮಣನೂ ಜೀವನೂ ಒಂದೆಂಬ

ಮಾಯಾವಾದಿಗಳ ತರಿದು

ವಾಯುಮತ ಪ್ರೀತಿಯಲಿ ಅರುಹುತ

ಪ್ರಿಯ ಅಬ್ಬೂರಲಿ ನೆಲೆಸಿದ ॥೨॥


ವಿಠ್ಠಲ ನೃಹರಿ ಪೂಜೆಗೆ ನೇಮಿಸಿ ತಮ್ಮ

ಪಟ್ಟದ ಶಿಷ್ಯರು ವ್ಯಾಸತೀರ್ಥರ

ಅಟ್ಟಹಾಸದಿ ಸರ್ವಜಿತು ಸಂವತ್ಸರ

ಕೃಷ್ಣ ಏಕಾದಶಿ ವೈಶಾಖ

ದಿಟ್ಟ ಗುರುಗೋವಿಂದವಿಠ್ಠಲನ

ದೃಷ್ಟಿಸಿ ತನು ಬಿಟ್ಟು ಪೊರಟನ ॥೩॥

*****