ರಾಗ - : ತಾಳ -
ಶ್ರೀರಾಮನೆ ಬಾರೊ ಬೇಗನೆ l ಸಾರಿಕೊಂಬೆನು ll ಪ ll
ಬಾರದಿರಲು ಕಾರಣಾವದು ತಾರಿಸೂವದು ಸರಸಿಜನಯನನೆ ll ಅ ಪ ll
ರಾವಣಾರಿಯೆ ಶ್ರೀವಧೂಟಿಯೆ ಪಾವನಾಮೃತಾ l
ತೀವ ಸತ್ಕಥಾ ಸೇವಿಸೂವೆವು ಪರಂತರ ಅರಿಧರ ವರದಾ ll 1 ll
ಭಕ್ತಭಾಷಣ ನಿತ್ಯಪೋಷಣ ಕೃತ್ಯ ಕೋವಿದ l
ಚಿತ್ರ ವೈಭವ ಶತ್ರುಸೂದನ ಧುರಂಧರ ಪರತರ ಸುಗುಣ ll 2 ll
ಇಂದಿರೇಶನೆ ನಂದಸೂನುನೆ ನಂದು ಪ್ರಾರ್ಥನಾಮಿಂದು ಕೇಳೊ l
ಸಿಂಧುರೇಷ್ಟದ ಪುರಂದರ ಪರಮ ಹಿತಕರ ಶ್ರೀರಾಮನೆ ll 3 ll
***